
ಕಲಬುರಗಿ,ಮೇ.25-ನಗರದ ರಾಜಾಪುರದ ಶಹಾಬಾದ ರಿಂಗ್ ರೋಡ್ ಹತ್ತಿರದ ಟೀಸ್ಟಾಲ್ ಬಳಿ ಇರುವ ಸಾರ್ವಜನಿಕ ರಸ್ತೆಯ ಮೇಲೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಚಂದ್ರಶೇಕರ್, ಸಿಬ್ಬಂದಿಗಳಾದ ಈರಣ್ಣಾ, ಜೈಭೀಮ, ವಿಠೋಬಾ ಅವರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಸೇಡಂ ರಸ್ತೆಯ ಆರ್‍ಟಿಒ ಕಚೇರಿ ಹತ್ತಿರದ ಆಂಜನೇಯ ನಗರ ಕಾಲೋನಿಯ ಮಲ್ಲಿನಾಥ ತಂದೆ ಲಕ್ಷ್ಮಣ ಜಮಾದಾರ (32) ಎಂಬಾತನನ್ನು ಬಂಧಿಸಿ 5 ಸಾವಿರ ನಗದು, ತಲಾ 5 ಸಾವಿರ ರೂಪಾಯಿ ಮೌಲ್ಯದ 2 ಮೊಬೈಲ್ ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























