Home ಜಿಲ್ಲೆ ಕಾಮಗಾರಿ ಪರಿವೀಕ್ಷಣೆ

ಕಾಮಗಾರಿ ಪರಿವೀಕ್ಷಣೆ

ಧಾರವಾಡ,ಆ೨೯: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಉಗ್ಗಿನಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಬಿ-ಜಿ ಆರ್‌ಎಎಂ ಜಿ ಯೋಜನೆಯಡಿಯಲ್ಲಿ ಉಗ್ಗಿನಕೇರಿ ಗ್ರಾಮದ ಹೆಗ್ಗೇರಿ ಕೆರೆ ಪುನಃಶ್ಚೇತನಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಭೇಟಿ ನೀಡಿ ಕಾಮಗಾರಿ ಸ್ಥಳವನ್ನು ಪರಿವೀಕ್ಷಣೆ ಮಾಡಿದರು.


ಯೋಜನೆಯ ಕುರಿತು ಕೂಲಿ ಕಾರ್ಮಿಕರ ಜೊತೆ ಸಂವಾದ ನಡೆಸಿದರು. ಹಾಗೇ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರ್ಮಿಕರು ಈ ಯೋಜನೆಯಲ್ಲಿ ಭಾಗವಹಿಸಲು ತಿಳಿಸಿದ್ದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಸಾವಂತ್, ಕಲಘಟಗಿ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಗಿರೀಶ್ ಕೋರಿ, ಪಿಡಿಓ, ಟಿಸಿ, ಖಿIಇಅ, ದಿವಾಕರ ಖಿಂಇ, ಗ್ರಾಮ ಪಂಚಾಯತ ಕಾರ್ಯದರ್ಶಿಗಳು, ಬಿಎಫ್‌ಟಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.