Home ಜಿಲ್ಲೆ ಬೆಂಗಳೂರು ಅಂಧ ಮಕ್ಕಳೊಂದಿಗೆ ಇಂದಿರಾ ಜನ್ಮದಿನಾಚರಣೆ

ಅಂಧ ಮಕ್ಕಳೊಂದಿಗೆ ಇಂದಿರಾ ಜನ್ಮದಿನಾಚರಣೆ

ಬೆಂಗಳೂರು,ನ.೧೯- ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ, ಭಾರತರತ್ನ ಇಂದಿರಾ ಗಾಂಧಿ ರವರ ೧೦೯ ನೇ ಜನ್ಮದಿನದ ಅಂಗವಾಗಿ ಇಂದು ಬೆಂಗಳೂರಿನ ಶೇಷಾದ್ರಿಪುರ ಅಂಧ ಮಕ್ಕಳೊಂದಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್ ಅವರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿ ಅರ್ಥಪೂರ್ಣವಾಗಿ ಆಚರಿಸಿದರು.


ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ದೇಶಪ್ರೇಮ, ಧೈರ್ಯ, ದೂರದೃಷ್ಟಿ ಹಾಗೂ ದೇಶದ ಏಕತೆ ಸಮಗ್ರತೆಗಾಗಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.


ಇಂದಿರಾ ಗಾಂಧಿ ರವರು ತಮ್ಮ ಆಡಳಿತಾವಧಿಯಲ್ಲಿ ಬಡವರು, ದುರ್ಬಲರು ಹಾಗೂ ಸಮಾಜದ ಶೋಷಿತ ವರ್ಗಗಳ ಏಳಿಗೆಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು.
ಅವರ ನಾಯಕತ್ವ, ಬದ್ಧತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಇಂದಿಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರೇರಣೆಯಾಗಿವೆ.


ಇಂದಿರಾ ಗಾಂಧಿಜಿ ಎಂದರೆ ಬಡವರ ದೇವರೆಂದು ಜನರು ಇಂದಿಗೂ ಸ್ಮರಿಸುತ್ತಾರೆ,


ಈ ಸಂದರ್ಭದಲ್ಲಿ ಅಂಧರ ಶಾಲೆಯ ಅಂಧ ಮಕ್ಕಳು ಶ್ರೀಮತಿ. ಇಂದಿರಾಗಾಂಧಿ ಜೀ ರವರಿಗೆ ಜನ್ಮದಿನದ ಶುಭಾಶಯಗಳು ಸಲ್ಲಿಸಿದರು. ಅವರೊಂದಿಗೆ ಕೇಕ್ ಕತ್ತರಿಸುವ ಮೂಲಕ ಇಂದಿರಾ ಗಾಂಧಿ ರವರ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಆನಂದ್, ಕುಶಾಲ್ ಹರುವೆಗೌಡ ನವೀನ್ ಸಾಯಿ, ಪ್ರವೀಣ್ ರಾವ್, ಪವನ್ ಕುಮಾರ್, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.