
ಕಲಬುರಗಿ,ಅ.10: ನರಿಬೋಳ ಚಾಮನೂರಿನ ಅಪೂರ್ಣವಾದ ಸೇತುವೆ ಪೂರ್ಣಗೊಳಿಸಲು ಆಗ್ರಹಿಸಿ ನಡೆಸುತ್ತಿದ್ದ ಅನಿರ್ದಿಷ್ಟ ಧರಣಿಯನ್ನು ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಹಿಂದಕ್ಕೆ ಪಡೆಯಲಾಗಿದೆ ಎಂದು
ಕ.ಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.
ಧರಣಿಯ ನಾಲ್ಕನೆ ದಿನ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಒಂದು ತಿಂಗಳ ಒಳಗಡೆ ಭೂಈಸ್ವಾಧೀನ ಪ್ರಕ್ರಿಯೆ ಮುಗಿಸಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುವ ಭರವಸೆ ನೀಡಿದ್ದಾರೆ .ಎಂಎಲ್ಸಿ ಚುನಾವಣೆ ಸಂಬಂಧವಾಗಿ ನೋಟಿಫಿಕೇಷನ್ ಮಾಡಲಿಕ್ಕೆ ಆಗುವುದಿಲ್ಲ.ಚುನಾವಣೆ ಮರುದಿವಸವೆ ಪ್ರಕ್ರಿಯೆ ಪ್ರಾರಂಭಿಸಲಾಗುವದು ಎಂದು ಅಧಿಕಾರಿಗಳು ತಿಳಿಸಿದರು.ಈ ಭರವಸೆಯಂತೆ ನಡೆಯಬೇಕು ಇಲ್ಲದಿದ್ದರೆ ಇದಕ್ಕಿಂತಲೂ ಉಗ್ರವಾದ ಹೋರಾಟ ನಡೆಸಲಾಗುವದು ಎಂದು ಹೋರಾಟಗಾರರು ತಿಳಿಸಿದರು.
ಈ ಸಂದರ್ಭದಲ್ಲಿ ಬಹುಜನ ಪಾರ್ಟಿ ರಾಜ್ಯ ಕಾರ್ಯದರ್ಶಿ ಹುಚ್ಚೇಶ್ವರ ವಠಾರ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ,ವಿಜಯಸೇನೆ ಜಿಲ್ಲಾದ್ಯಕ್ಷ ಪೃಥ್ವಿರಾಜ ರಾಂಪೂರ ,ಗುರಣ್ಣ ಹೈನಾಪೂರ, ಸುಮಾ ಕವಲ್ದಾರ ,ಸಂತೋಷ ಪಾಟೀಲ ಇಟಗಿ, ನಿಂಗಣ್ಣ ಗಡ್ಡದ ನರಿಬೋಳ ಇನ್ನಿತರ ಹೋರಾಟಗಾರರು ಇದ್ದರು.























