Home ಜಿಲ್ಲೆ ಕಲಬುರಗಿ ರಾಯಚೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ6 ಕೋಟಿ ಅನುದಾನ ಬಳಕೆಯ ಸ್ವತಂತ್ರ ಆಡಿಟ್‍ಗೆ ಆಗ್ರಹ

ರಾಯಚೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ6 ಕೋಟಿ ಅನುದಾನ ಬಳಕೆಯ ಸ್ವತಂತ್ರ ಆಡಿಟ್‍ಗೆ ಆಗ್ರಹ

ಕಲಬುರಗಿ,ಅ.10: ರಾಯಚೂರು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸುಮಾರು 6 ಕೋಟಿ ರೂ.ಸರ್ಕಾರಿ ಅನುದಾನದ ಬಳಕೆ, ಖರೀದಿ, ಟೆಂಡರ್, ಪೂರೈಕೆ, ಬಿಲ್ ಪಾವತಿ, ದಾಸ್ತಾನು, ವಿತರಣೆ ಹಾಗೂ ಸಂಬಂಧಿತ ಆಡಳಿತಾತ್ಮಕ ಪ್ರಕ್ರಿಯೆಗಳ ಕುರಿತು ಕೇಳಿಬಂದಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಇಲಾಖಾ ಮಟ್ಟದ ಸಾಮಾನ್ಯ ಪರಿಶೀಲನೆಯ ಬದಲಾಗಿ ಸ್ವತಂತ್ರ ಉನ್ನತ ಮಟ್ಟದ ವಿಶೇಷ ಆಡಿಟ್ ಮತ್ತು ಸಮಗ್ರ ದಾಖಲೆ ಆಧಾರಿತ ತನಿಖೆ ನಡೆಸಬೇಕೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಆಗ್ರಹಿಸಿದ್ದಾರೆ.
ಈ ಕುರಿತು ಈಗಾಗಲೇ ಕರ್ನಾಟಕ ಲೋಕಾಯುಕ್ತರಿಗೆ2025ರ ಜೂನ್ 12 ರಂದು ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಸಾರ್ವಜನಿಕ ಹಣದ ಸಂರಕ್ಷಣೆ, ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುವ ಉದ್ದೇಶದಿಂದ, ಈ ಪ್ರಕರಣದ ತನಿಖೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ನೇರ ಅಥವಾ ಪರೋಕ್ಷ ಹಸ್ತಕ್ಷೇಪವಿಲ್ಲದೆ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್ ರಾಯಚೂರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.ಸುಮಾರು 6 ಕೋಟಿ ಸರ್ಕಾರಿ ಅನುದಾನದ ಸ್ವತಂತ್ರ ವಿಶೇಷ ಆಡಿಟ್ ನಡೆಸಬೇಕು.ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಬೇಕು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳನ್ನು ವಿಶೇಷ ಆಡಿಟ್ ತಂಡದಿಂದ ಹೊರಗಿಡಬೇಕು.ಖಜಾನೆ ಬಿಲ್‍ಗಳು, ಟೆಂಡರ್, ಖರೀದಿ, ಪೂರೈಕೆ, ದಾಸ್ತಾನು ಮತ್ತು ವಿತರಣಾ ದಾಖಲೆಗಳ ಸಂಪೂರ್ಣ ಪರಿಶೀಲನೆ ನಡೆಸಬೇಕು.ಎಲ್ಲಾ ತಾಲ್ಲೂಕುಗಳ ಕಲ್ಯಾಣಾಧಿಕಾರಿಗಳ ಆಡಿಟ್ ವರದಿಗಳನ್ನು ಮರುಪರಿಶೀಲಿಸಬೇಕು.ಸುನೀತಾ ಘಟಕಾಂಬಳೆ ಅವರ ಆಡಿಟ್ ವರದಿಯ ಸತ್ಯಾಸತ್ಯತೆಯನ್ನು ಮೂಲ ದಾಖಲೆಗಳೊಂದಿಗೆ ಪರಿಶೀಲಿಸಬೇಕು.ಡಾ. ಅಶೋಕ್ ಅವರ ಸಂಬಂಧಪಟ್ಟ ಅವಧಿಯ ಆಡಳಿತಾತ್ಮಕ ಜವಾಬ್ದಾರಿಯನ್ನು ಪರಿಶೀಲಿಸಬೇಕು.ರಮೇಶ ರಾಠೋಡ ಅವರ ಹಿಂದಿನ ಆಡಳಿತಾತ್ಮಕ ಕ್ರಮ ಮತ್ತು ಪ್ರಸ್ತುತ ನಿಯೋಜನೆಯನ್ನು ಪರಿಶೀಲಿಸಬೇಕು.ತನಿಖೆಯ ಅವಧಿಯಲ್ಲಿ ದಾಖಲೆಗಳ ಸುರಕ್ಷತೆ ಮತ್ತು ತನಿಖೆಯ ನಿಷ್ಪಕ್ಷಪಾತತೆಗಾಗಿ ಅಗತ್ಯ ಮಧ್ಯಂತರ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು.ಅಗತ್ಯವಿದ್ದಲ್ಲಿ ಡಾ. ಅಶೋಕ್ ಅವರನ್ನು ಅವರ ಮಾತೃ ಇಲಾಖೆಯಾದ ಶಿಕ್ಷಣ ಇಲಾಖೆಗೆ ಮರುನಿಯೋಜಿಸುವ ಕುರಿತು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ರಮೇಶ ರಾಠೋಡ ಅವರನ್ನು ಆಯುಕ್ತರ ಕಚೇರಿ, ಬೆಂಗಳೂರು, ಇಲ್ಲಿಗೆ ವರ್ಗಾವಣೆ/ನಿಯೋಜಿಸುವ ಕುರಿತು ಸಕ್ಷಮ ಪ್ರಾಧಿಕಾರ ಪರಿಶೀಲಿಸಬೇಕು.ಅಗತ್ಯವಿದ್ದಲ್ಲಿ ಡಿಜಿಟಲ್ ದಾಖಲೆಗಳ ಫೋರೆನ್ಸಿಕ್ ವೆರಿಫಿಕೇಷನ್ ನಡೆಸಬೇಕು.ತನಿಖೆಯಲ್ಲಿ ಆರೋಪಗಳು ದೃಢಪಟ್ಟಲ್ಲಿ ಅನ್ವಯಿಸುವ ಸೇವಾ ನಿಯಮಗಳು ಮತ್ತು ಕಾನೂನುಗಳ ಪ್ರಕಾರ ಕ್ರಮ ಕೈಗೊಳ್ಳಬೇಕು.ಅಪರಾಧದ ಅಂಶಗಳು ದೃಢಪಟ್ಟಲ್ಲಿ ಸೂಕ್ತ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು.ಈಗಾಗಲೇ ಲೋಕಾಯುಕ್ತರಿಗೆ ಸಲ್ಲಿಸಿರುವ ದೂರಿನೊಂದಿಗೆ ಅಗತ್ಯ ಸಮನ್ವಯ ಸಾಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.