Home ಜಿಲ್ಲೆ ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಆದಾಯ ಹೆಚ್ಚಿಸಿಕೊಳ್ಳಿ

ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಆದಾಯ ಹೆಚ್ಚಿಸಿಕೊಳ್ಳಿ


ಚನ್ನಮ್ಮನ ಕಿತ್ತೂರು,ಆ.೨೮: ಹಳೆಯ ಕೃಷಿ ಪದ್ದತಿ ಕಡಿಮೆ ಮಾಡಿ ನೂತನ ಕೃಷಿ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಆಧುನಿಕ ತಂತ್ರಜ್ಞಾನ ಬಳಿಸಿ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ಹಾಗೂ ಉತ್ತಮ ಆದಾಯ ರೈತರು ಪಡೆದುಕೊಳ್ಳಬೇಕೆಂದು ಶಾಸಕ ವಿಠ್ಠಲ್ ಹಲಗೇಕರ ಹೇಳಿದರು.


ಸಮೀಪದ ಖಾನಾಪೂರ ಪಟ್ಟಣದ ತಾಲುಕ ಕೃಷಿ ಕಛೇರಿಯಲ್ಲಿ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಫಲಾನುಭವಿ ರೈತರಿಗೆ ವಿತರಿಸಿ ಮಾತನಾಡಿದರು. ಛಾಪಗಾಂವ ಒಳಗೊಂಡAತೆ ಕ್ಷೇತ್ರದ ವಿವಿಧ ಗ್ರಾಮಗಳ ರೈತರು ಯೋಜನೆಯ ಸದುಪಯೋಗ ಪಡೆದುಕೊಂಡಿದ್ದು ಅಧುನಿಕ ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ಶ್ರಮ ಮತ್ತು ಸಮಯ ಉಳಿತಾಯವಾಗುವುದರ ಜೊತೆಗೆ ಕೃಷಿ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಿದೆ. ಒಟ್ಟಾರೆಯಾಗಿ ನನ್ನ ಕ್ಷೇತ್ರದ ರೈತರ ಕೃಷಿಗೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸರ್ಕಾರದಿಂದ ಸಿಗುವ ಎಲ್ಲ ಸಹಾಯಹಸ್ತ ಭರಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದರು.


ತಾಲೂಕ ಕೃಷಿ ಅಧಿಕಾರಿ ಎ.ಡಿ.ಚವ್ಹಾಣ, ಮಾತನಾಡಿ ಹಳೆಯ ತಂತ್ರಜ್ಞಾನ ಬಿಟ್ಟು ಸರ್ಕಾರದ ಹೊಸ ತಂತ್ರಜ್ಞಾನ ಉಪಯೋಗಿಸಿ ಉತ್ಪಾದನೆ ಹೆಚ್ಚಿಸಿಕೊಂಡು ರೈತರು ಮುಂದೆ ಬರಬೇಕು. ರೈತರ ಕೃಷಿಗೆ ಬೇಕಾಗುವ ಎಲ್ಲ ಯಂತ್ರೋಪಕರಣಗಳನ್ನು ಸರ್ಕಾರ ಭರಿಸಲು ಸಿದ್ದವಿದೆ. ಇದರ ಸದುಪಯೋಗ ಪಡೆಕೊಳ್ಳಬೇಕೆಂದು ಕರೆನೀಡಿದರು.


ಈ ವೇಳೆ ತಾಲೂಕ ಕೃಷಿ ಅಧಿಕಾರಿ ಎ.ಡಿ.ಚವ್ಹಾಣ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಲೈಲಾ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸದಾನಮದ ಪಾಟೀಲ, ಆತ್ಮಾನಂದ ಪಾಟೀಲ, ರಾಹುಲ್ ಅಳವಣೆ, ವಿಜಯ ಕಾಮತ್, ಬಿಜೆಪಿ ಮುಖಂಡರು, ತಾಲೂಕಿನ ವಿವಿಧ ಭಾಗಗಳ ರೈತರು, ಫಲಾನುಭವಿಗಳು, ಕೃಷಿಸಿಬ್ಬಂದಿ ಇತರರಿದ್ದರು.