
ಮುನವಳ್ಳಿ,ಸೆ.೧೮: ಪಟ್ಟಣದ ಶ್ರೀ ಪಂಚಲಿAಗೇಶ್ವರ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಜೆ.ಎಸ್.ಪಿ ಸಂಘದ ಶ್ರೀ ಬಿ.ಎಫ್.ಯಲಿಗಾರ ಶಿಕ್ಷಣ ಮಹಾವಿದ್ಯಾಲಯದ ಮೂರು ದಿನಗಳ ಪೌರತ್ವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಮಂಗಳವಾರ ಜರುಗಿತು.
ಸಂಸ್ಥೆ ಕೋಶಾದ್ಯಕ್ಷ ರವೀಂದ್ರ ಯಲಿಗಾರ ಶಿಬಿರವನ್ನು ಉದ್ಘಾಟಿಸಿದರು.
ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು ಸಾನಿಧ್ಯ ವಹಿಸಿ ಆಶಿರ್ವಚನದಲ್ಲಿ ಸರ್ವರೋಗಕ್ಕು ಯೋಗ ಮದ್ದುಆಗಿದೆ ಮಕ್ಕಳು ಯೋಗದಲ್ಲಿ ತಲ್ಲಿನರಾಗಿ ರಾಜ್ಯರಾಷ್ಟçಮಟ್ಟದಲ್ಲಿ ಹೆಸರು ತರುವಂತಾಗಬೇಕೆAದರು.
ಸಂಸ್ಥೆಯ ಕೋಶಾಧ್ಯಕ್ಷ ಎಮ್.ಆರ್.ಗೋಪಶೆಟ್ಟಿ ಅದ್ಯಕ್ಷತೆ ವಹಿಸಿದ್ದರು.
ನಿಪ್ಪಾಣಿ ಕೆ.ಎಲ್.ಇ ಸಂಸ್ಥೆಯ ಪ್ರಾಚಾರ್ಯ ಡಾ. ಬಿ.ಬಿ.ಪೋಲೀಸ ಪಾಟೀಲ ಮಾತನಾಡಿ ಶಿಕ್ಷಕರು ಕೇವಲ ಪಠ್ಯಪುಸ್ತಕ ಬೋಧನೆಗೆ ಸೀಮಿತವಾಗದೆ ಉತ್ತಮ ಸಮಾಜ ನಿರ್ಮಿಸುವ ದಿಕ್ಸೂಚಿಯಾಗಬೇಕು. ಬಾವಿ ಶಿಕ್ಷಕರಲ್ಲಿ ನಾಯಕತ್ವ ಗುಣ, ಸಾಮಾಜಿಕ ಕಳಕಳಿ, ಶಿಸ್ತು, ಸೌಹಾರ್ದ, ದೇಶಪ್ರೇಮ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಪೌರತ್ವ ತರಬೇತಿ ಶಿಬಿರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸಂಘದ ಗೌರವ ಕಾರ್ಯದರ್ಶಿ ವಿ.ಎಸ್.ಯಕ್ಕುಂಡಿ ಮಾತನಾಡಿ ಇಂದು ಸಮಾಜಕ್ಕೆ ಕೇವಲ ಅಂಕ ಗಳಿಸುವ ಶಿಕ್ಷಕರ ಅಗತ್ಯವಿಲ್ಲ, ಬದಲಿಗೆ ಶ್ರೇಷ್ಠ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಆದರ್ಶ ಶಿಕ್ಷಕರ ಅಗತ್ಯವಿದೆ ಎಂದರು.
ಪ್ರಾಚಾರ್ಯ ಡಾ.ಎ.ಎಸ್.ಅಮೋಘಿಮಠ ಮಾತನಾಡಿ ಪೌರತ್ವ ಶಿಬಿರ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ಶ್ರಮದಾನ ಹಾಗೂ ಸಮುದಾಯ ಸೇವೆ ಮನೋಭಾವ ಹೆಚ್ಚಿಸುತ್ತದೆ ಎಂದರು.
ಪಿ.ವಿ.ಮೋಹರೆ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ.ಎ.ಎಸ್. ಅಮೋಘಿಮಠ ಸ್ವಾಗತಿಸಿ ಶಿಬಿರದ ಮಹತ್ವವನ್ನು ತಿಳಿಸಿದರು.
ಸುದಾಕರ ರೇಣಕೆ, ಪತ್ರಕರ್ತ ಟಿ.ಎನ್.ಮುರಂಕರ ಎಫ್,ವಿ.ಭೋವಿ, ಅಮಿತ ಕರಿಕಟ್ಟಿ, ಅಮಿತ ಅಬ್ಬಾರ, ಎ.ಎಲ್.ಬಡಿಗೇರ, ಜಿ.ವಿ.ಬಡಿಗೇರ, ಎಸ್.ಎಸ್.ನಡುವಿನಮನಿ, ಪಿ.ಆರ್.ಯಲ್ಲಯ್ಯಗೋಳ, ಎ.ಎಲ್.ರಾಮದುರ್ಗ, ಪಿ.ಎಂ.ಆಯಾಚಿತ, ಲಕ್ಷಿö್ಮÃ ಭಾಗನ್ನವರ, ರೇಷ್ಮಾ ಕಾರ್ಲಕಟ್ಟಿ ಇತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಮುದೆನೂರ ಕಾರ್ಯಕ್ರಮ ನಿರೂಪಸಿದರು, ಪ್ರಾಚಾರ್ಯ ವನಹಳ್ಳಿ ವಂದಿಸಿದರು.























