Home ಜಿಲ್ಲೆ ರಕ್ತದಾನ ಶಿಬಿರ

ರಕ್ತದಾನ ಶಿಬಿರ

ಚನ್ನಮ್ಮನ ಕಿತ್ತೂರ,ಅ ೯: ರಕ್ತದಾನವೆಂಬುವುದು ಕೇವಲ ದಾನವಲ್ಲ. ಅಗತ್ಯವಿರುವ ಜೀವಕ್ಕೆ ಹೊಸ ಆಶಾಕಿರಣ ಕೊಡುವ ಮಹತ್ವದ ಮಾನವೀಯ ಸೇವೆಯಾಗಿದೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಅಭಿಪ್ರಾಯಪಟ್ಟರು.


ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಹಾಗೂ ಸಾರ್ವಜನಿಕ ಜೀವನದಲ್ಲಿ ೨೫ ವರ್ಷಗಳ ಸೇವಾ ಪಯಣ ಪೂರೈಸಿದ ಹಿನ್ನೆಲೆ. ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಸಂಪಗಾAವಿ ಮಹಾಶಕ್ತಿ ಕೇಂದ್ರ, ಬಿಜೆಪಿ ಮಂಡಳ ಹಾಗೂ ಯುವ ಮೋರ್ಚಾ ಸಂಯೋಗದೊAದಿಗೆ ಕ್ಷೇತ್ರದ ಗದ್ದಿಕರವಿನಕೊಪ್ಪ ಕ್ರಾಸದಲ್ಲಿಯ ಬಿ.ಎಸ್.ಯಡಿಯೂರಪ್ಪ ಕಲ್ಯಾಣಮಂಟಪದಲ್ಲಿ ಆಯೋಜಿಸಿದ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಅಧ್ಯಕ್ಷಸ್ಥಾನವಹಿಸಿಕೊಂಡು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ. ಪ್ರತಿಯೊಬ್ಬರು ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಬಹುದು ಎಂದರು.

ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಮಾತನಾಡಿದರು.

ಸಂಸ್ಥಾಪಕ ಗಿರೀಶ ಬುಡರಕಟ್ಟಿ ಹಾಗೂ ಆಪ್ತಸಮಾಲೋಚಕಿ ಡಾ.ಪಲ್ಲವಿ ಎಸ್ ಹಡಪದ ಬೆಳಗಾವಿ ಬ್ಲೆಡ್ ಸೆಂಟರ್ ಇವರ ಆಶ್ರಯದಲ್ಲಿ ರಕ್ತ ಸಂಗ್ರಹಿಸಲಾಯಿತು.


ಇದೇ ವೇಳೆ ಕಿತ್ತೂರ ತಾಲೂಕಿಗೆ ಕಾದ್ರೋಳ್ಳಿ ವಿರುಪಾಕ್ಷಗೌಡ ಪಾಟೀಲ, ನೇಸರಗಿ ವಿಭಾಗಕ್ಕೆ ಕುರಗುಂದ ಪ್ರಕಾಶ ಅಂಗಡಿ, ಜಿಲ್ಲೆ ಯುವಮೋರ್ಚಾ ಕಾರ್ಯಕಾರಣಿ ಸದಸ್ಯ ಹಿರೇನಂದಿಹಳ್ಳಿ ಗ್ರಾಮದ ಬಸವರಾಜ ಜುಲ್ಪಿ ಹೀಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಿದರು. ಶಿಬಿರದಲ್ಲಿ ಮುಖಂಡೆ ಲಕ್ಷಿö್ಮÃತಾಯಿ ಇನಾಮದಾರ, ನ್ಯಾಯವಾದಿ ರಾಜೇಂದ್ರ ಹೊಶೆಟ್ಟಿ, ಬಸವರಾಜ ಮಾತನವರ, ಎಸ್.ಎಂ.ಪಾಟೀಲ, ಮಹಾಂತೇಶ ಚಿನ್ನಪ್ಪಗೌಡರ, ರಮೇಶ ಉಗರಖೋಡ, ಸಿದ್ದು ಗೋಳನ್ನವರ, ನಾಗರಾಜ ದುರಗದ, ಅನಿಲ್‌ದೇವ ನೇಸರಗಿ, ಉಮೇಶ ಸಿದ್ರಾಮನಿ, ಸೇರಿದಂತೆ ಇತರರಿದ್ದರು.