Home ಜಿಲ್ಲೆ ಸಮುದಾಯ ಭವನ ಉದ್ಘಾಟನೆ

ಸಮುದಾಯ ಭವನ ಉದ್ಘಾಟನೆ

ಲಕ್ಷೆ÷್ಮÃಶ್ವರ,ಸೆ ೪: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಶ್ರೀ ಗುಂಡೇಶ್ವರ ಸಮುದಾಯ ಭವನದ ಉದ್ಘಾಟನೆಯನ್ನು ವಿಧಾನಸಭೆಯ ಸ್ಪೀಕರ್ ಜಿಎಸ್ ಪಾಟೀಲ್ ನೆರವೇರಿಸಿದರು.
ಬಳಿಕ ಮಾತನಾಡಿದವರು ಗ್ರಾಮದ ಅಭಿವೃದ್ಧಿ ಕೇವಲ ರಸ್ತೆ ಕಟ್ಟಡ ಮೂಲಸೌಕರ್ಯ ಇವುಗಳಿಂದ ಮಾತ್ರ ಅಲ್ಲ ಜನರಲ್ಲಿ ಪರಸ್ಪರ ಪ್ರೀತಿ ಸೌಹಾರ್ದತೆ ಸಹಕಾರ ಮತ್ತು ಸಹೋದರತೆಯಿಂದ ಬಾಳಿ ಬದುಕುವುದು ಅವಶ್ಯವಿದೆ.


ಗ್ರಾಮದ ಜನರು ಸರ್ಕಾರ ಹಾಗೂ ಭಕ್ತರ ನೆರವಿನಿಂದ ಸಮುದಾಯ ಭವನ ನಿರ್ಮಿಸಿದ್ದು ಈ ಸಮುದಾಯವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡು ಗ್ರಾಮದಲ್ಲಿ ಸಾಂಸ್ಕöÈತಿಕ ಸಾಮಾಜಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒಂದು ಕೇಂದ್ರವನ್ನಾಗಿ ಮಾಡಬೇಕು ಎಂದು ಹೇಳಿದರು.


ಸಾನಿಧ್ಯವಹಿಸಿದ್ದ ಶ್ರೀ ಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕೃಷಿಯನ್ನೇ ಮೂಲಗಿಸಿಕೊಂಡಿರುವ ಗ್ರಾಮೀಣ ಜನರು ಮಕ್ಕಳಿಗೆ ಶಿಕ್ಷಣ ಸಂಸ್ಕಾರ ಧರ್ಮ ಪರಂಪರೆ ಮತ್ತು ಮಾನವೀಯ ಮೌಲ್ಯಗಳು ಬೆಳೆಸಿ ಸುಂದರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡಿಕೊಂಡು ಸಮುದಾಯ ಭವನವನ್ನು ಒಂದು ಸಾಂಸ್ಕöÈತಿಕ ಕೇಂದ್ರವನ್ನಾಗಿ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಿಎಸ್ ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಮತ್ತಿತ್ತರು ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಮೀಟಿ ಅಧ್ಯಕ್ಷ ಗುಂಡಪ್ಪ ಗೌಡ ಪಾಟೀಲ್ ವಹಿಸಿದ್ದರು.