
ಬಂಗಾರಪೇಟೆ: ಜು,೨೯-ಪಟ್ಟಣದ ಕುಪ್ಪಸ್ವಾಮಿ ಮೂದಲಿಯಾರ್ ಬಡಾವಣೆಯ ಗಾಯತ್ರಿ ದೇವಾಸ್ಧಾನದ ಮುಂಭಾಗ ಇರುವಂತ ಸೇತುವೆ ಕುಸಿಯುತ್ತಿದೆ.ಈ ರಸ್ತೆಯ ಮಾರ್ಗವಾಗಿ ಶಾಲೆಯ ಬಸ್‌ಗಳು, ಕಟ್ಟಡ ನಿರ್ಮಾಣದ ಸಮಗ್ರಿಗಳನ್ನ ಹೊತ್ತು ಬರುವ ಲೋಡ್ ಲಾರಿಗಳು ಈ ರಸ್ತೆಯ ಮುಖಂತರವೇ ಬಡಾವಣೆಯ ನಾನಾ ಭಾಗಗಳಿಗೆ ಸಾಗಲು ಇರುವಂತ ರಸ್ತೆ.
ಸೇತುವೆಯ ಕೆಳಗೆ ರಾಜಕಾಲುವೆಯ ಕೊಳಚೆ ನೀರು ಹರಿಯುವುದರಿಂದ ಕಾಲುವೆ ಎರಡು ಬದಿಗಳಲ್ಲಿ ಕಲ್ಲಿನ ತಡೆಗೋಡೆ ನಿರ್ಮಾಣ ಮಾಡದೆ ದಶಕಗಳಿಂದ ಹಾಗೆ ಬಿಟ್ಟಿರುವುದಿರಿಂದ ಮನೆಗಳ ಹಿಂಭಾಗವೇ ಕಾಲುವೆಯ ಕೊಳಚೆ ನೀರು ಹರಿಯುತ್ತ ದಿನದಿಂದ ದಿನಕ್ಕೆ ಕಾಲುವೆ ಸುತ್ತಲತೆ ಮನೆಗಳ ಗೋಡೆಗಳಿಗೆ ತಾಕುತ್ತಿರುವುದು ಹಾಗೂ ವಿಪರೀತ ಸೊಳ್ಳೆಗಳ ಕಾಟ ಹಾಗೂ ಹಂದಿಗಳ ಒಡಾಟ ಬಡಾವಣೆಗಳಲ್ಲಿ ಹೆಚ್ಚುತ್ತಿದೆ ಈ ರಾಜಕಾಲುವೆಯಿಂದ ಒಂದೆಡೆ ಸಾರ್ವಜನಿಕರ ಆಸ್ತಿ ನಷ್ಟ ಮತ್ತೊಂದು ಕಡೆ ಆನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿದೆ ಇದು ನಿಜಕ್ಕೂ ಮುಂದೆ ಸಾರ್ವಜನಿಕರಿಗೆ ಆಪಾಯಕಾರಿಯಾಗಿ ಪರಿಣಾಮಿಸಲಿದೆ.
ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಎಚ್ಚತ್ತುಕೊಂಡು ರಾಜಕಾಲುವೆ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿ ಸೇತುವೆಯನ್ನ ಹೊಸದಾಗಿ ನಿರ್ಮಾಣ ಮಾಡಿದರೆ ಮುಂದೆ ಮನೆಗಳಿಗೆ ಮತ್ತು ಸಾರ್ವಜನಿಕರಿಗೆ ಆಗಬಹುದಾದ ಅನಾಹುತವನ್ನು ತಪ್ಪಿಸಿದಂತಾಗುತ್ತದೆ.
ಒಂದು ವೇಳೆ ಇತ್ತಕಡೆ ಗಮನ ಹರಿಸದಿದ್ದೆರೆ ಖಂಡಿತ ಇಂದಲ್ಲ ನಾಳೆ ಅನಾಹುತ ಸಂಭವಿಸುದರಲ್ಲಿ ಅನುಮಾನವಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.


































