Home ಜಿಲ್ಲೆ ಬೆಂಗಳೂರು ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಆಚರಣೆ

ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಆಚರಣೆ

ಕೋಲಾರ,ಜು,೩೦-ತಾಲ್ಲೂಕಿನ ಕುರುಗಲ್ ಗ್ರಾಮದ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮತ್ತು ಎಲ್.ಜಿ ಫೌಂಡೇಶನ್ ಅಧ್ಯಕ್ಷ ದೊಡ್ಡವಲ್ಲಬ್ಬಿ ಲಕ್ಷ್ಮಣಗೌಡ ಭಾಗವಹಿಸಿದ್ದರು.


ಈ ಸಂದರ್ಭಧಲ್ಲಿ ಸಿಎಂಆರ್ ಶ್ರೀನಾಥ್ ಮಾತನಾಡಿ ನಾಡಿನ ಜನತೆಗೆ ಹಾಗೂ ಜಿಲ್ಲೆಯ ರತ ಬಂಧುಗಳಿಗ ಸಾಯಿಬಾಬರ ಆಶೀರ್ವಾದ ದೊರೆಯಲಿ. ಜನರು ತಮ್ಮೊಳಗಿನ ಸಣ್ಣಪುಟ್ಟ ವೈಮನಸ್ಸುಗಳನ್ನು ಮರೆತು ದೇವರ ಕೃಪೆಗೆ ಪಾತ್ರರಾಗಲು ಇಲ್ಲಿಗೆ ಆಗಮಿಸಿದ್ದಾರೆ ಎಲ್ಲರಿಗೂ ಆರೋಗ್ಯ, ಆಯುಷ್ಯ ಹಾಗೂ ನೆಮ್ಮದಿಯ ಜೀವನ ಸಿಗುವಂತಾಗಲಿ ಎಂದು ಹಾರಸಿದರು.


ಇದೇ ವೇಳ ಕುರುಗಲ್ ಗ್ರಾಮಸ್ಥರು ಹೈಮಾಸ್ಟ್ ದೀಪ ಅಳವಡಿಸುವಂತೆ ಲಕ್ಷ್ಮಣಗೌಡ ಅವರಿಗೆ ಮನವಿ ಸಲ್ಲಿಸಿದರು.


ಇದಕ್ಕೆ ಸ್ಪಂದಿಸಿದ ಅವರು ನನ್ನ ಸ್ವಂತ ಹಣದಲ್ಲಿ ಹಾಕಿಸಲಾಗುತ್ತದೆ ಕೂಡಲೇ ಸಂಬಂಧಪಟ್ಟ ಗುತ್ತಿಗದಾರನಿಗ ತಕ್ಷಣವೇ ಸೂಚನೆ ನೀಡಿ, ೨೦ ದಿನಗಳೊಳಗ ಹೈಮಾಸ್ಟ್ ದೀಪ ಅಳವಡಿಸಿ ಬೆಳಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು


ಕುರುಗಲ್ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೈಗಾರಿಕೆಗಳು ಇದ್ದರೂ ಸಹ ಮಂಡಲ್ ನಿಂದ ಗ್ರಾಮ ಪಂಚಾಯತಿಯಾಗಿ ಈಗ ಪಟ್ಟಣ ಪಂಚಾಯತಿ ಆದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಶಾಸಕರು, ಪರಿಷತ್ ಸದಸ್ಯರು, ಸಂಸದರು ಇದರ ಬಗ್ಗೆ ಗಮನ ಹರಿಸಿಲ್ಲ ಗ್ರಾಮಸ್ಥರು ಕೊಟ್ಟು ಮನವಿ ಪತ್ರದಲ್ಲಿ ಇರುವುದನ್ನು ಅಭಿವೃದ್ಧಿಗೆ ಸರ್ಕಾರದ ಅನುದಾನದ ಜೊತೆಗ ಕೈಗಾರಿಕೆಗಳ ಸಿಎಸ್‌ಆರ್ ಅನುದಾನವನ್ನು ಸಹ ಬಳಸಿಕೊಂಡು ಮೂಲಭೂತ ಸೌಕರ್ಯಗಳನ್ನು ಕಲ್ಲಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ, ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಸದಸ್ಯರಾದ ಲೋಕೇಶ್ ಮರಿಯಪ್ಪ, ರಮೇಶ್, ತಾಪಂ ಮಾಜಿ ಸದಸ್ಯ ಚನ್ನಸಂದ್ರ ಲೋಕೇಶ್, ಲತಾ ಲಕ್ಷ್ಮಣಗೌಡ, ಜೆಡಿಎಸ್ ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಕುರುಗಲ್ ಗಿರೀಶ್ ಮುಂತಾದವರು ಇದ್ದರು.