Home ಜಿಲ್ಲೆ ಬೆಂಗಳೂರು ಸಾಯಿಬಾಬಾ ಮಂದಿರದಲ್ಲಿ ಗುರುಪೌರ್ಣಿಮೆ

ಸಾಯಿಬಾಬಾ ಮಂದಿರದಲ್ಲಿ ಗುರುಪೌರ್ಣಿಮೆ

ಬಂಗಾರಪೇಟೆ,ಜು,೩೦- ಬಂಗಾರಪೇಟೆ-ಕೆಜಿಎಫ್ ಮುಖ್ಯರಸ್ತಯ ಎಸ್.ಜಿ.ಕೋಟೆಯಲ್ಲಿರುವ ದಕ್ಷಿಣ ಶಿರಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯನ್ನು ಅಂಗವಾಗಿ ಸಾಯಿಬಾಬಾ ಗುರುವಿನ ವಿಶೇಷ ಆರಾಧನೆ ಭಕ್ತಿಭಾವದಿಂದ ನೆರವೇರಿತು.


ಧರ್ಮದರ್ಶಿ ಮುನಿಮಾರಪ್ಪ ಮಾತನಾಡಿ, ಕಳದ ೧೦ ವರ್ಷಗಳಿಂದ ಗುರುಪೂರ್ಣಿಮೆ ಹಾಗೂ ಹೊಸ ವರ್ಷದ ಆರಂಭದ ದಿನ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಈ ವರ್ಷವೂ ಮುಂಜಾನೆಯಿಂದಲೇ ಸಾಯಿಬಾಬಾ ಸ್ವಾಮಿಗ ವಿವಿಧ ಅಭಿಷೇಕ, ಹೋಮ, ಸತ್ಯನಾರಾಯಣ ಪೂಜೆ ಹಾಗೂ ಭಕ್ತರಿಂದ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಜೊತೆಗ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.


ಮಧ್ಯಾಹ್ನ ಮಹಾಮಂಗಳಾರತಿ, ಸಂಜೆ ಭಜನೆ-ಕೀರ್ತನೆ, ಪಲ್ಲಕ್ಕಿ ಉತ್ಸವ ಹಾಗೂ ದಿನವಿಡೀ ಅನ್ನದಾಸೋಹ ಮತ್ತು ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.


ಕಾರ್ಯದರ್ಶಿ ಡಾ. ರಾಧಾ ವಿ ಮಾತನಾಡಿ, ಆಷಾಢ ಮಾಸದ ಮೊದಲ ಹುಣ್ಣಿಮೆಯನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದ ವತಿಯಿಂದ ವರ್ಷಪೂರ್ತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆ, ವಿಜಯದಶಮಿ ವಾರ್ಷಿಕೋತ್ಸವ, ಗ್ರಾಮೀಣ ಪ್ರದೇಶದ ವೃದ್ಧರಿಗೆ ಕಂಬಳಿ ವಿತರಣೆ, ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣ, ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ, ವೀರಯೋಧರ ಸನ್ಮಾನ ಹಾಗೂ ಅಂಗವಿಕಲರಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.


ದೇವಾಲಯದ ಅಭಿವೃದ್ಧಿಗೆ ಸಹಕರಿಸುತ್ತಿರುವ ದಾನಿಗಳು ಹಾಗೂ ಭಕ್ತರಿಗೆ ಧರ್ಮದರ್ಶಿ ಮುನಿಮಾರಪ್ಪ ಮತ್ತು ಕಾರ್ಯದರ್ಶಿ ಡಾ. ರಾಧಾ ವಿ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಹೆಚ್ಚಿನ ಸಂಖೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪಗ ಪಾತ್ರರಾಗುವುದರೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.