Home ಮುಖಪುಟ ಸುದ್ದಿ ಮತ ಚೀಟಿ ಇದ್ದವರಿಗೆ ಮಾತ್ರ ಗ್ಯಾರಂಟಿ: ಡಿಕೆಶಿ

ಮತ ಚೀಟಿ ಇದ್ದವರಿಗೆ ಮಾತ್ರ ಗ್ಯಾರಂಟಿ: ಡಿಕೆಶಿ

ಬೆಂಗಳೂರು,ಜೂ.೧೫: ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಸ್ಥಗಿತಗೊಳಿಸಲಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿಗಳು, “ಟೀಕೆ ಮಾಡುವುದಕ್ಕಾಗಿಯೇ ವಿರೋಧ ಪಕ್ಷದವರಿದ್ದಾರೆ. ಯೋಜನೆಗಳನ್ನು ತಡೆಯುವುದು ಅವರ ಕೆಲಸ, ಅದನ್ನೇ ಅವರು ಮಾಡುತ್ತಿದ್ದಾರೆ.

ಅವರ ಕೈಯಲ್ಲಿ ಇಂತಹ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಾಗಿಲ್ಲ. ಆದರೆ ನಾವು ಮಾಡಿಕೊಟ್ಟಿದ್ದೇವೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ವಿವಾದ ಹಾಗೂ ಗ್ಯಾರಂಟಿ ಯೋಜನೆಗಳ ಕುರಿತು ವಿರೋಧ ಪಕ್ಷಗಳ ಟೀಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.


ಗ್ಯಾರಂಟಿ ಹಣ ದುರುಪಯೋಗವಾಗುತ್ತಿರುವ ಬಗ್ಗೆ ಜಾಗೃತಿ ವಹಿಸಲಾಗುತ್ತಿದೆ ಎಂದರು. “ಆರಂಭದಲ್ಲಿ ತರಾತುರಿಯಲ್ಲಿ ಅರ್ಜಿ ಸಲ್ಲಿಸುವಾಗ ಯಾರದ್ದೋ ಮೊಬೈಲ್ ನಂಬರ್, ದಾಖಲೆ ನೀಡಿದ್ದರಿಂದ ಹಣ ಬೇರೆಯವರ ಖಾತೆಗೆ ಜಮೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈಗ ನಮ್ಮ ಬಳಿ ಸೂಕ್ತ ದಾಖಲೆಗಳಿವೆ. ಗ್ಯಾರಂಟಿ ತಲುಪಲು ಫೋಟೋ ಐಡೆಂಟಿಫಿಕೇಷನ್ ಹಾಗೂ ಸೂಕ್ತ ದಾಖಲೆ ಬೇಕು. ನಾವು ಕರ್ನಾಟಕದವರಿಗೆ ಮಾತ್ರ ಯೋಜನೆ ನೀಡುತ್ತೇವೆ. ಇಲ್ಲಿ ವೋಟ್ (ಮತದಾನದ ಹಕ್ಕು) ಇದ್ದವರಿಗೆ ಮಾತ್ರ ಗ್ಯಾರಂಟಿ ಸಿಗಲಿದೆ” ಎಂದು ಮಹತ್ವದ ಹೇಳಿಕೆ ನೀಡಿದರು.


ಜೆಡಿಎಸ್ ಕೈಗೊಂಡಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಬಿಡದಿ ಟೌನ್‌ಶಿಪ್ ಯೋಜನೆ ತಂದಿದ್ದು ನಾನಲ್ಲ ಎಂದು ಸ್ಪಷ್ಟನೆ ನೀಡಿದರು.
ಮಹಾರಾಷ್ಟ್ರದಲ್ಲಿ ೮೦ ಸಾವಿರ ಎಕರೆ ಹಾಗೂ ತೆಲಂಗಾಣದಲ್ಲಿ ೪೦ ಸಾವಿರ ಎಕರೆ ಭೂಸ್ವಾಧೀನ ಮಾಡಿ ಟೌನ್‌ಶಿಪ್ ನಿರ್ಮಿಸಲಾಗಿದೆ. ಬಿಡದಿಯಲ್ಲಿ ನಾನು ಟೌನ್‌ಶಿಪ್ ಮಾಡುತ್ತಿಲ್ಲ. ಹಿಂದೆ ಕುಮಾರಸ್ವಾಮಿ ಅವರ ಅವಧಿಯಲ್ಲೇ ಈ ಟೌನ್‌ಶಿಪ್ ಘೋಷಣೆಯಾಗಿತ್ತು. ಅಷ್ಟೇ ಅಲ್ಲದೆ, ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏIಂಆಃ ಗೆ ೧ ಸಾವಿರ ಎಕರೆ ಭೂಮಿ ಕೊಟ್ಟಿದ್ದರಲ್ಲಾ, ಆಗ ರೈತರ ಜಮೀನು ಹೋಗಿರಲಿಲ್ಲವೇ ಅವರು ಕೇವಲ ರಾಜಕಾರಣ ಮಾಡುತ್ತಿದ್ದಾರೆ, ಮಾಡಲಿ” ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ನಮ್ಮ ಸ್ನೇಹಿತ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಎಡಗೈ ಹಾಗೂ ಎದೆಯ ಭಾಗದಲ್ಲಿ ಲಘು ನೋವು ಕಾಣಿಸಿಕೊಂಡ ತಕ್ಷಣವೇ ವೈದ್ಯರ ಬಳಿ ಕರೆತರಲಾಗಿದೆ. ಸದ್ಯ ಅವರು ಆರೋಗ್ಯವಾಗಿದ್ದು, ವೈದ್ಯರು ತಪಾಸಣೆ ನಡೆಸಿದ್ದಾರೆ. ಯಾರೂ ಗಾಬರಿಯಾಗಬೇಕಾಗಿಲ್ಲ. ವೀಕೆಂಡ್ ಮುಗಿದ ನಂತರ ಅವರು ಫೋರ್ಟಿಸ್ ಆಸ್ಪತ್ರೆಯಲ್ಲಿ ಮುಂದಿನ ಚಿಕಿತ್ಸೆ ಪಡೆಯಲಿದ್ದಾರೆ. ನಾನು ಈಗಾಗಲೇ ವೈದ್ಯರೊಂದಿಗೆ ಮಾತನಾಡಿದ್ದು, ಆತಂಕ ಪಡುವಂತಹದ್ದು ಏನೂ ಇಲ್ಲ” ಎಂದು ಸಿಎಂ ಸ್ಪಷ್ಟಪಡಿಸಿದರು