
ಬೆಂಗಳೂರು,ಸೆ.೧-ರಾಜ್ಯದಲ್ಲಿ ನಡೆಯುತ್ತಿರುವ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪುನರ್ ಪರಿಶೀಲನಾ ಸಮೀಕ್ಷೆಯ ಅವಧಿಯನ್ನು ಸರ್ಕಾರ ಮತ್ತೊಂದು ತಿಂಗಳ ಕಾಲ ವಿಸ್ತರಿಸಿದೆ. ಗ್ರಾಹಕರ ಅನುಕೂಲಕ್ಕಾಗಿ ಸೆಪ್ಟೆಂಬರ್ ೩೦ರವರೆಗೆ ಸಮೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ.
೨೦೨೩ರ ಜುಲೈನಲ್ಲಿ ಜಾರಿಗೊಂಡ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಹತೆ ಹಾಗೂ ದಾಖಲೆಗಳ ಪುನರ್ ಪರಿಶೀಲನೆಗಾಗಿ ಜುಲೈ ೧, ೨೦೨೬ರಿಂದ ಮನೆ-ಮನೆ ಸಮೀಕ್ಷೆ ಆರಂಭಿಸಲಾಗಿತ್ತು. ಈ ಕಾರ್ಯದಲ್ಲಿ ಬೆಸ್ಕಾಂ ಸೇರಿದಂತೆ ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್ಗಳು ಮನೆಗಳಿಗೆ ತೆರಳಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಒಟ್ಟು ೬೮,೮೬,೮೬೦ ಗೃಹಜ್ಯೋತಿ ಫಲಾನುಭವಿಗಳಿದ್ದು, ಆಗಸ್ಟ್ ೩೧ರ ವೇಳೆಗೆ ೪೬,೭೦,೫೮೮ ಫಲಾನುಭವಿಗಳ ಸಮೀಕ್ಷೆ ಪೂರ್ಣಗೊಂಡಿದೆ. ಅಂದರೆ ಬೆಸ್ಕಾಂ ವ್ಯಾಪ್ತಿಯಲ್ಲಿ ಶೇ.೭೦ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಬಾಕಿ ಉಳಿದ ಫಲಾನುಭವಿಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲು ಅವಧಿ ವಿಸ್ತರಿಸಲಾಗಿದೆ.
ಗ್ರಾಹಕರು ಯಾವುದೇ ಗೊಂದಲ ಅಥವಾ ಮಾಹಿತಿ ಪಡೆಯಲು ಬೆಸ್ಕಾಂ ಬಿಡುಗಡೆ ಮಾಡಿರುವ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಸಹಾಯವಾಣಿ:
೯೪೮೦೮೧೬೧೧೧
೯೪೮೦೮೧೬೧೧೨
೯೪೮೦೮೧೬೧೧೩
೯೪೮೦೮೧೬೧೧೪.
ವಿವಿಧ ಎಸ್ಕಾಂಗಳಲ್ಲಿ ಪೂರ್ಣಗೊಂಡ ಸಮೀಕ್ಷೆ:
ಬೆಸ್ಕಾಂ : ೪೬,೪೩,೬೬೧
ಸಿಇಎಸ್ಸಿ: ೧೫,೬೬,೫೯೨
sಜೆಸ್ಕಾಂ: ೧೧,೮೭,೧೩೨
ಎಸ್ಕಾಂ: ೨೭,೮೯,೫೯೩
ಎಚ್ಆರ್ಇಸಿಎಸ್: ೭೬,೬೯೮
ಮೆಸ್ಕಾಂ: ೧೪,೪೮,೪೮೮
ಒಟ್ಟು: ೧,೧೭,೧೨,೧೬೪ ಫಲಾನುಭವಿಗಳ ಸಮೀಕ್ಷೆ ಪೂರ್ಣಗೊಂಡಿದೆ.
ಮನೆ-ಮನೆಗೆ ಭೇಟಿ ನೀಡುವ ಮೀಟರ್ ರೀಡರ್ಗಳಿಗೆ ಗ್ರಾಹಕರು ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ವಿದ್ಯುತ್ ಸರಬರಾಜು ಕಂಪನಿಗಳು ಮನವಿ ಮಾಡಿವೆ.


































