
ಚನ್ನಮ್ಮನ ಕಿತ್ತೂರು,ಆ೨೫: ಸಾರ್ವಜನಿಕರ ಪ್ರದೇಶದಲ್ಲಿ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ೩.೨೫ ಕೋಟಿ ರೂ. ವೆಚ್ಚದಲ್ಲಿ ಹೀಗೆ ಹತ್ತಾರು ಯೋಜನೆಗಳನ್ನು ಇಟ್ಟುಕೊಳ್ಳಲಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ವಿವಿಧ ವಾರ್ಡ ಓಣಿಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿ ಚನ್ನಮ್ಮನ ಕೋಟೆ ಹಾಗೂ ಪಟ್ಟಣ ಸೇರಿ ಈಗಾಗಲೇ ಸರ್ಕಾರದಿಂದ ೩೦ ಕೋಟಿ ರೂ. ಅಭಿವೃದ್ದಿ ಕಾಮಗಾರಿಗಳಿಗೆ ಅನುಮತಿ ಸಿಕ್ಕಿದೆ. ಇನ್ನೂ ೫೦ ಕೋಟಿ ರೂ. ಮುಖ್ಯಮಂತ್ರಿ ಹತ್ತಿರ ಬೇಡಿಕೆಯಿಟ್ಟಿದ್ದು ಅದನ್ನು ನೀಡುವ ಭರವಸೆ ಕೊಟ್ಟಿದ್ದಾರೆ.
ಸಂಗೋಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಸಿಕ್ಕಂತೆ ಹಣ ಕಿತ್ತೂರ ಪ್ರಾಧಿಕಾರಕ್ಕೂ ಅನುದಾನ ಸಿಗುವ ಭರವಸೆ ನನಗಿದೆ. ಆದರೆ ಅದು ಇಲ್ಲಿಯವರೆಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದ ಕಾರಣ ಕೋಟೆಯಲ್ಲಿಯ ಥೀಮ್ ಪಾರ್ಕ ಸೇರಿ ಅನೇಕ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿದ್ದವು. ನಾನು ಶಾಸಕನಾದ ಬಳಿಕ ಕೋಟೆ ಅಭಿವೃದ್ದಿ ಇನ್ನೂಳಿದ ಕಾಮಗಾರಿಗಳು ವೇಗದಿಂದ ಸಾಗಿದವು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಅಭಿವೃದ್ದಿಪಡಿಸುವ ಇಚ್ಚೆ ಜನಪ್ರತಿನಿಧಿಗಳಲ್ಲಿಯಿರಬೇಕು. ಅಂದಾಗ ನಾವು ಮಾಡಿದ ಕೆಲಸ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಜೈಸಿದ್ರಾಮ ಮಾರಿಹಾಳ, ಪಪಂ ಆಡಳಿತ ಅಧಿಕಾರಿ ಹಾಗೂ ಪಪಂ ವರ್ಗ, ಅಭಿಯಂತರರು ವೆಂಕಟೇಶ ಕಾಮಣ್ಣವರ, ಅಶಪಾಕ ಹವಾಲ್ದಾರ, ಶಂಕರ ಬಡಿಗೇರ, ಪಾಪು ನರಗುಂದ, ದಿನೇಶ ಒಳಸಂಗ, ಮಂಜು ದೊಡ್ಡಣ್ಣವರ, ಕೃಷ್ಣಾ ಬಾಳೇಕುಂದರಗಿ, ಪ್ರವೀಣ ಪಾಟೀಲ, ನದಿಮುಲ್ಲಾ ಸೇರಿದಂತೆ ಗುತ್ತಿಗೆದಾರ ಸಾರ್ವಜನಿಕರು ಇತರರಿದ್ದರು.






























