
ಚನ್ನಮ್ಮನ ಕಿತ್ತೂರು,ಸೆ೧೯: ಸುಮಾರು ೧೫ ವರ್ಷಗಳ ಹಿಂದೆ ಕಿತ್ತೂರಿನಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣವಾಗಬೇಕಾಗಿತ್ತು. ತಾಲೂಕ ಸೇವಾ ಸಮಿತಿಯ ಕಾರ್ಯಚಟುವಟಿಕೆಗಳು ಅಧಿಕೃತವಾಗಿ ತಾಲೂಕಾಗಿರುವ ಬೈಲಹೊಂಗಲ ನ್ಯಾಯಾಲಯದ ಮೂಲಕವೇ ನಡೆಯುತ್ತಿರುವುದರಿಂದ ಹಲವು ಕಾರಣಗಳಿಗೆ ಅಲ್ಪಸ್ವಲ್ಪ ಅಡೆತಡೆಗಳು ಎದುರಾಗಿದ್ದವು ಎಂದು ಮಂಜುನಾಥ ನಾಯಕ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾ ನ್ಯಾಯಾಂಗ ಮತ್ತು ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಹೆದ್ದಾರಿ ೪ರ ಪಕ್ಕ ನೂತನವಾಗಿ ನಿರ್ಮಾಣವಾಗುತ್ತಿರುವ ಕೋರ್ಟ ಕಟ್ಟಡ ಹತ್ತಿರ ವಸತಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ನ್ಯಾಯಾಲಯದಲ್ಲಿ ತಾಲೂಕ ಸೇವಾ ಸಮಿತಿ ಉದ್ಘಾಟಿಸಿ ಮಾತನಾಡಿದರು. ಸದ್ಯದಲ್ಲಿ ಕಿತ್ತೂರಿನ ನ್ಯಾಯಾಲಯದಲ್ಲಿಯೇ ನ್ಯಾಯವಾದಿಗಳು ಸಾರ್ವಜನಿಕರಿಗೆ ಬಹಳ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ. ಅದಲ್ಲದೇ ನ್ಯಾಯವಾದಿಗಳಿಗೆ, ಸಾರ್ವಜನಿಕರಿಗೆ ರಾಷ್ಟಿçÃಯ ಹೆದ್ದಾರಿ ಇರುವುರಿಂದ ವಾಹನ ಸಂಚಾರ ಹೆಚ್ಚಾಗಿದ್ದು ನ್ಯಾಯಾಲಯಕ್ಕೆ ಸಮಯಕ್ಕೆ ಬರಲು ಇನ್ನೂ ಅನುಕೂಲವಾಯಿತು ಎಂದರು.
ಕಾರ್ಯಕ್ರಮದಲ್ಲಿ ಬೈಲಹೊಂಗಲ ಪ್ರಥಮ ದರ್ಜೆ ದಿವಾನಿ ನ್ಯಾಯಾಧೀಶ ಪ್ರವೀಣ ಚವ್ಹಾಣ, ಕಿತ್ತೂರ ಪ್ರಥಮ ದರ್ಜೆ ದಿವಾನಿ ನ್ಯಾಯಾಧೀಶ ಮಹಮ್ಮದಲಿ ನಾಯಕ, ಲೋಕೋಪಯೋಗಿ ಬೆಳಗಾವಿ ವೃತ್ತದ ಮುಖ್ಯ ಅಧೀಕ್ಷಕ ಇಇ ಸಂಜೀವಕುಮಾರ ಹುಲಜಿ, ಬೆಳಗಾವಿ ವಿಭಾಗ ಕಾರ್ಯನಿರ್ವಾಹಕ ಇಂಜೀನಿಯರ್ ಎಇಇ ಪ್ರವೀಣ ಆರ್., ಕಿತ್ತೂರು ಪಿಡಬ್ಲೂಡಿ ಎಇಇ ಜಯಂತ ಗುಂಜಾಟ್ಕರ ಪಾಟೀಲ, ನ್ಯಾಯವಾದಿಗಳಾದ ಹಿರಿಯ ನ್ಯಾಯವಾದಿ ವಿಶ್ವನಾಥ ಬಿಕ್ಕಣ್ಣವರ, ಎಸ್.ಡಿ.ಬೋಗೂರ, ಎಮ್.ಎಸ್.ಸಾನಿಕೊಪ್ಪ, ಬಿ.ಡಿ.ಹಿರೇಮಠ, ಎನ್.ಎ. ಮರೇದ, ವಿ.ಎನ್.ಬೂದ್ನೂರ, ಕೆ.ಎನ್.ಸರದಾರ, ಸಿ.ಡಿ.ಮಾಳಗಿ, ಎನ್.ಎಸ್.ಹಂಚಿನಮನಿ, ಕಿತ್ತೂರು ಲೋಕೋಪಯೋಗಿ ಇಲಾಖೆ ವ್ಯವಸ್ಥಾಪಕ ಶ್ರೀಧರ ಪೂಜಾರ, ಪಿ.ಬಿ.ತಳವಾರ, ಆರ್.ಎಚ್. ಬೆನಚಮರಡಿ, ಬಿ.ಕೆ.ಸವದತ್ತಿ, ಇನಾಮದಾರ, ಬೇಟಗಾರ, ಶಿರಸ್ತೆದಾರ ಚೌಗಲೆ ಸೇರಿದಂತೆ ಕೋರ್ಟ ಲೋಕೋಪೊಯೋಗಿ ಸಿಬ್ಬಂದಿ, ಅಧಿಕಾರಿಗಳು, ನ್ಯಾಯವಾದಿಗಳು ಇತರರಿದ್ದರು.























