Home ಜಿಲ್ಲೆ ಬೆಂಗಳೂರು ಪರಮೇಶ್ವರ್‌ರಿಗೆ ಛಲವಾದಿ ಮುಖಂಡರಿಂದ ಅದ್ದೂರಿ ಸ್ವಾಗತ

ಪರಮೇಶ್ವರ್‌ರಿಗೆ ಛಲವಾದಿ ಮುಖಂಡರಿಂದ ಅದ್ದೂರಿ ಸ್ವಾಗತ

ಕೋಲಾರ.ಜು,೨೩- ಕೋಲಾರ ನಗರಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರನ್ನು ನಗರದ ಛಲವಾದಿ ಸಂಘಟನೆಯ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಚಂದ್ರಮೌಳಿ,ರಕ್ಷಣಾ ವೇದಿಕೆ ಸೋಮಶೇಖರ್ ಮತ್ತಿತರರು ಸ್ವಾಗತಿಸಿ,ಡಿಸಿಎಂ ಪರಮೇಶ್ವರ್ ಪರವಾಗಿ ಘೋಷಣೆ ಕೂಗಿದರು.


ಕೋಲಾರದ ಬಂಗಾರಪೇಟೆ ವೃತ್ತದಲ್ಲಿ ಅವರನ್ನು ಸ್ವಾಗತಿಸಿದ್ದು, ಅಲ್ಲಿನ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಶ್ರೀನಿವಾಸ್, ಪರಮೇಶ್ವರ್ ಅವರು ಈ ಹಿಂದೆಯೂ ಉಪಮುಖ್ಯಮಂತ್ರಿಗಳಾಗಿದ್ದರು, ಇದೀಗ ಬರ ವೀಕ್ಷಣೆಗೆ ಬಂದಿದ್ದು, ಅವರು ಹೆಚ್ಚಿನ ಪರಿಹಾರವನ್ನು ಜಿಲ್ಲೆಗೆ ಕೊಡಿಸುವ ಭರವಸೆ ಇದೆ ಎಂದರು.ಬಡವರು, ದೀನದಲಿತರ ನಾಯಕ ರಾಗಿರುವ ಪರಮೇಶ್ವರ್ ಅವರು, ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಬರದ ವೀಕ್ಷಣೆ ನಡೆಸಿದ್ದು, ಅವರಿಂದ ಜಿಲ್ಲೆಯ ಜನತೆ ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿದ್ದು, ಅವರು ಈ ಸಂಬಂಧ ಕ್ರಮ ಕೈಗೊಳ್ಳಲಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್, ಕೆವೈ ನಂಜೇಗೌಡ, ಎಮ್.ಎಲ್.ಸಿ ಅನಿಲ್ ಕುಮಾರ್, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್ ಮತ್ತಿತರರಿದ್ದರು.