Home ಸುದ್ದಿ ರಾಷ್ಟ್ರೀಯ ಪತಿ ಕೊಲೆ: ಸೋನಂ ಜಾಮೀನು ರದ್ದು

ಪತಿ ಕೊಲೆ: ಸೋನಂ ಜಾಮೀನು ರದ್ದು

ನವದೆಹಲಿ,ಜು.೨೩- ಮಧುಚಂದ್ರದ ಸಮಯದಲ್ಲಿ ಪತಿ ರಾಜಾ ರಘುವಂಶಿಯನ್ನು ಕೊಂದ ಆರೋಪ ಹೊತ್ತಿರುವ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ಇಂದು ರದ್ದುಗೊಳಿಸಿದೆ.
ಅಲ್ಲದೆ ಮೂರು ವಾರಗಳಲ್ಲಿ ಶರಣಾಗುವಂತೆ ಸೋನಂ ರಘುವಂಶಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಆದಾಗ್ಯೂ, ವಿಚಾರಣೆ ವಿಳಂಬವಾದರೆ, ಆರು ತಿಂಗಳ ನಂತರ ಹೊಸ ಜಾಮೀನು ಅರ್ಜಿ ಸಲ್ಲಿಸಲು ಆಕೆಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.


ಸೋನಮ್ ರಘುವಂಶಿಗೆ ನೀಡಲಾದ ಜಾಮೀನನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಏಪ್ರಿಲ್ ೨೮ ರಂದು ಶಿಲ್ಲಾಂಗ್‌ನ ನ್ಯಾಯಾಲಯ ಸೋನಮ್ ರಘುವಂಶಿಗೆ ಜಾಮೀನು ನೀಡಿತು. ಈಗ ಜಾಮೀನು ರದ್ದು ಮಾಡಲಾಗಿದೆ.


ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರನ್ನು ಮೇ ೨೦೨೫ ರಲ್ಲಿ ಮೂವರು ದುಷ್ಕರ್ಮಿಗಳಿಂದ ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಕೊಲೆಯಾಗಿದ್ದರು.. ಮಧ್ಯಪ್ರದೇಶದ ಉದ್ಯಮಿ ತಮ್ಮ ಪತ್ನಿಯೊಂದಿಗೆ ಹನಿಮೂನ್‌ಗೆ ಬಂದಿದ್ದಾಗ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಘಟನೆ ಹಿಂದಿನ ರುವಾರಿ ಪತ್ನಿಯೇ ಎನ್ನುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಆ ನಂತರ ಜಾಮೀನು ಮಂಜೂರು ಮಾಡಲಾಗಿತ್ತು.


ವಿಚಾರಣೆಯ ಸಮಯದಲ್ಲಿ, ಸೋನಮ್ ರಘುವಂಶಿ ಅವರ ವಕೀಲರು ಪ್ರಕರಣದಲ್ಲಿ ಒಟ್ಟು ೯೪ ಸಾಕ್ಷಿಗಳನ್ನು ಹೆಸರಿಸಲಾಗಿದೆ ಎಂದು ಹೇಳಿದ್ದರು ಈ ಪೈಕಿ ಇಲ್ಲಿಯವರೆಗೆ ಕೇವಲ ನಾಲ್ಕು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಪೂರಕ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದ್ದು, ಕಠಿಣ ಷರತ್ತುಗಳಿಗೆ ಒಳಪಟ್ಟು ಅವರಿಗೆ ಜಾಮೀನು ನೀಡಲಾಗಿತ್ತು


ಉತ್ತರ ಪ್ರದೇಶದ ಗಾಜಿಪುರದಲ್ಲಿ ಬಂಧಿಸಲಾಗಿತ್ತು. ಮತ್ತು ಅವರ ಬಂಧನವನ್ನು ಶರಣಾಗತಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಲಾಗಿತ್ತು.ಇದೀಗ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದೆ.
ಸೋನಂ ಅವರ ವಕೀಲರು, ಅವರು ಜಾಮೀನಿನ ಕಟ್ಟುನಿಟ್ಟಿನ ಷರತ್ತುಗಳನ್ನು ಪಾಲಿಸುತ್ತಿದ್ದಾರೆ ಮತ್ತು ಅವರು ಪರಾರಿಯಾಗುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದರು


ಮೇಘಾಲಯ ಸರ್ಕಾರವನ್ನು ಪ್ರತಿನಿಧಿಸುವ ಎಸ್‌ಜಿ ತುಷಾರ್ ಮೆಹ್ತಾ, ಆರೋಪ ಪಟ್ಟಿಯಲ್ಲಿ ದಾಖಲಾಗಿರುವಂತೆ ಆರೋಪಿ ಸ್ವತಃ ಶರಣಾಗಿರುವುದರಿಂದ ಬಂಧನಕ್ಕೆ ಉಲ್ಲೇಖಿಸಲಾದ ಆಧಾರಗಳು ಆಧಾರರಹಿತವಾಗಿವೆ ಎಂದು ಹೇಳಿದರು.

ಕಳೆದ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಸೋನಂ ವಕೀಲರಿಗೆ ಸೋನಂ ರಘುವಂಶಿ ಶರಣಾಗಬೇಕೆ ಅಥವಾ ನ್ಯಾಯಾಲಯ ಅವರ ಜಾಮೀನು ರದ್ದುಗೊಳಿಸುವ ಬಗ್ಗೆ ನಿರ್ಧರಿಸಬೇಕೆ ಎಂಬ ಎರಡು ಆಯ್ಕೆಗಳನ್ನು ನೀಡಿತ್ತು.ಈಗ ಜಾಮೀನು ರದ್ದುಗೊಳಿಸಿ ಶರಣಾಗುವಂತೆ ಸೂಚಿಸಿದೆ.