Home ಜಿಲ್ಲೆ ಕಲಬುರಗಿ ಎಸ್‍ಐಆರ್ ನಮೂನೆ ಸರಿಯಾಗಿ ಭರ್ತಿಮಾಡಿ ಶೀಘ್ರವಾಗಿ ಬಿ.ಎಲ್.ಓ ಗೆ ಸಲ್ಲಿಸಿ: ಹಜರತ್ ಡಾ.ಹಾಫೀಜ್ ಸೈಯದ್ ಮೊಹ್ಮದ್...

ಎಸ್‍ಐಆರ್ ನಮೂನೆ ಸರಿಯಾಗಿ ಭರ್ತಿಮಾಡಿ ಶೀಘ್ರವಾಗಿ ಬಿ.ಎಲ್.ಓ ಗೆ ಸಲ್ಲಿಸಿ: ಹಜರತ್ ಡಾ.ಹಾಫೀಜ್ ಸೈಯದ್ ಮೊಹ್ಮದ್ ಅಲಿ ಅಲ್ ಹುಸೇನಿ

ಕಲಬುರಗಿ: ಇಲ್ಲಿನ ಸುಪ್ರಸಿದ್ದ ದರ್ಗಾ ಹಜರತ್ ಖ್ವಾಜಾ ಬಂದೇನವಾಜ್ (ರ.ಹ.) ಅವರ ಸಜ್ಜಾದಾ ನಶೀನ್ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಹಜರತ್ ಡಾ. ಹಫೀಜ್ ಸಯ್ಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯಕ್ರಮದ ಅಂಗವಾಗಿ ಮತದಾರರ ಗಣತಿ ನಮೂನೆಯನ್ನು ಭರ್ತಿ ಮಾಡಿ ಬಿಎಲ್‍ಒ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಮತದಾರರ ಅರ್ಜಿ ನಮೊನೆಯನ್ನು ಸರಿಯಾಗಿ ಭರ್ತಿ ಮಾಡಿ ಶಿಘ್ರವಾಗಿ ತಮ್ಮ ವ್ಯಾಪ್ತಿಯ ಬಿಎಲ್‍ಓ ಗಳಿಗೆ ಸಲ್ಲಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಎಲ್‍ಒ (ಪಿ-151) ಅಫ್ಜಲ್ ರಶೀದ್, ನೋಡಲ್ ಅಧಿಕಾರಿ ಶರಣಕುಮಾರ ತೆಂಗ್ಲಿ ಹಾಗೂ ಬಿಎಲ್‍ಒ ಮೇಲ್ವಿಚಾರಕಿ ಶ್ರೀಮತಿ ಅಶ್ವಿನಿ ಕುಲಕರ್ಣಿ ಅವರು, ಭರ್ತಿ ಮಾಡಿದ ನಮೂನೆಯನ್ನು ಪರಿಶೀಲಿಸಿ ಸ್ವೀಕೃತಿಯ ಪ್ರಕ್ರಿಯೆ ಪೂರ್ಣಗೊಳಿಸಿದರು. ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯ ಜನಾಬ್ ಖುಸ್ರೋ ಜಗೀರ್‍ದಾರ್ ಅವರು ಸಹ ಉಪಸ್ಥಿತರಿದ್ದರು.
ಈ ಕುರಿತು ಮಾತನಾಡಿದ ಡಾ. ಹಫೀಜ್ ಸಯ್ಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರು, ಕಲಬುರಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರು ತಮ್ಮ ಎಸ್‍ಐಆರ್ ಅರ್ಜಿ ನಮೂನೆಗಳನ್ನು ಶೀಘ್ರವಾಗಿ ಭರ್ತಿ ಮಾಡಿ ಸಲ್ಲಿಸುವಂತೆ ಮನವಿ ಮಾಡಿದರು. ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ಕೊನೆಯ ಕ್ಷಣದವರೆಗೆ ಕಾಯದೇ ಅಗತ್ಯ ಮಾಹಿತಿಗಳನ್ನು ಮೊದಿಸಿ ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸುವಂತೆ ಅವರು ಕರೆ ನೀಡಿದರು.
ಕೊನೆಯ ದಿನಗಳಲ್ಲಿ ಒತ್ತಡ ಮತ್ತು ಗಲಿಬಿಲಿಯ ತೊಂದರೆಗೆ ಅವಕಾಶ ನೀಡದೇ ಆದಷ್ಟು ಬೇಗ ಅರ್ಜಿ ನಮೊನೆಯನ್ನು ಭರ್ತಿ ಮಾಡಿ ಸಲ್ಲಿಸುವಂತೆ ಮನವಿ ಮಾಡಿದ ಅವರು, ದಿನಗಳು ಸಮೀಪಿಸುತಿದ್ದಂತೆ ಅನಗತ್ಯ ತೊಂದರೆಗಳು ಉಂಟಾಗುತ್ತವೆ, ಹೀಗಾಗಿ ಹಿನ್ನು ಸಮಯವಿದೆ ಎಂದು ಕಾಯದೇ ಆದಷ್ಟು ಬೇಗ ತಮ್ಮ ಎಸ್.ಐ.ಆರ್ ಅರ್ಜಿಗಳನ್ನು ಭರ್ತಿ ಮಾಡುವಂತೆ ಅವರು ಕಿವಿ ಮಾತು ಹೇಳಿದರು. ನಿಗದಿತ ಸಮಕ್ಕೂ ಮುನ್ನ ನಮೂನೆ ಸಲ್ಲಿಸುವಂತೆ ಅವರು ಸಲಹೆ ನೀಡಿದರು. ಅಲ್ಲದೆ, ಎಲ್ಲಾ ಅರ್ಹ ಮತದಾರರು ಬೂತ್ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್‍ಓ) ಸಹಕರಿಸಿ ತಮ್ಮ ವಿವರಗಳನ್ನು ಪರಿಶೀಲಿಸಿ ನವೀಕರಿಸಿಕೊಳ್ಳುವಂತೆ ಕರೆ ನೀಡಿದರು.