ಹುಮನಾಬಾದ್ : ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಹುಮನಾಬಾದ್ ಪಟ್ಟಣಕ್ಕೆ ಆಗಿಮಿಸಿದ ಸನ್ಮಾನ್ಯ ಶ್ರೀ ಡಾ. ಅಜಯ್ ಸಿಂಗ್ ಅವರನ್ನು ಠಾಕೂರ್ ಧಾಬಾದ ಮಾಲೀಕರು ಮತ್ತು ಉದ್ಯಮಿಗಳಾದ ಶ್ರೀ ನಾಗೇಂದ್ರ ಪ್ರಸಾಪಸಿಂಗ್ ಧಾಬಾ ಅವರು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಮಾನ್ಯ ಸಚಿವರಾದ ಶ್ರೀ ಡಾ. ಅಜಯ್ ಸಿಂಗ್ ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ನಾಗೇಂದ್ರ ಪ್ರಸಾಪಸಿಂಗ್ ಧಾಬಾ, ಚಂದ್ರಾಸಿAಗ್ , ಮಲ್ಲಕಣ್ಣ, ಆದಿತ್ಯನಾಥ್ , ಮೀರಾಜ್ ಬೋಸ್ , ಗುರುರಾಜ್ ಹುಮನಾಬಾದ್ , ಶಂಕೇತ್ ದುಬಲಗುಂಡಿ, ಆರ್, ಎಸ್ , ಯಾದವ್ , ಸಿದ್ರಾಮಪ್ಪ, ಪಂಡೀತ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಪ್ಪ ಸಾಹೇಬ್, ಆರ್ , ಕೆ, ಪ್ರೀಂಟರ್ ಮಾಲೀಕ ಮಹಾದೇವ, ಸೋಮು ನಂದಿ ತಡೋಳಾ, ರನ್ನು ಸಿಂಗ್ ಕಲಬುರ್ಗಿ, ದತ್ತು ಪದ್ಮಾ ಮಂಠಾಳ್, ಪ್ರದೀಪ್ ಸಿಂಗ್ ತಡೋಳಾ, ಫಯಾಜ್ ಜಮಾದಾರ್, ಮಸ್ತಾನ್ ತಡೋಳಾ, ಫೀರೋಜ್ ತಡೋಳಾ ಸೇರಿದಂತೆ ಇತರರು ಇದ್ದರು.
( ಬಾಕ್ಸ್ ಸುದ್ದಿ) ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ದಿ. ಧರ್ಮ್ ಸಿಂಗ್ ಅವರು ಹುಮನಾಬಾದ್ ಪಟ್ಟಣ ಸೇರಿದಂತೆ ಬೀದರ್ ಜಿಲ್ಲೆಗೆ ಆಗಮಿಸಿದಾಗ ಹುಮನಾಬಾದ್ ಪಟ್ಟಣದ ಹೊರವಲಯದ ಉದ್ಯಮಿ ನಾಗೇಂದ್ರ ಪ್ರಸಾಪಸಿಂಗ್ ಅವರ ಧಾಬಾಕ್ಕೆ ತಪ್ಪದೇ ಆಗಮಿಸಿ ತಮ್ಮ ನೆಚ್ಚಿನ ಆಹಾರವನ್ನು ಸೇವಿಸುತ್ತಿದ್ದರು. ಅಲ್ಲದೇ ನಾಗೇಂದ್ರ ಪ್ರಸಾಪಸಿಂಗ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.























