Home ಜಿಲ್ಲೆ ಕಲಬುರಗಿ ಅಜಯಸಿಂಗ್‍ಗೆ ಉತ್ತಮ ಖಾತೆ ನೀಡಿ

ಅಜಯಸಿಂಗ್‍ಗೆ ಉತ್ತಮ ಖಾತೆ ನೀಡಿ

ಕಲಬುರಗಿ,ಆ.10-ಯಾವ ಮೋಹವೊ, ಏನು ತೋಂದರೆಯೋ ನಿರಂತರ ವನವಾಸಗಳಿದು ಕಡೆಗೆ ಸಚಿವ ಸ್ಥಾನವನ್ನು ಜೇವರ್ಗಿ ಶಾಸಕ ಅಜಯ ಸಿಂಗ್ ಅವರಿಗೆ ನೀಡಲಾಗಿದೆ. ಜೊತೆಗೆ ಉತ್ತಮ ಖಾತೆ ಸಹ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿ ಅದ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಆಗ್ರಹಿಸಿದ್ದಾರೆ.
ಈ ಭಾಗದ ಬಗ್ಗೆ ಅತಿ ಹೆಚ್ಚು ಕಾಳಜಿ ಉಳ್ಳಂತಹ ಕುಟುಂಬಗಳ ಪೈಕಿ ಮಾಜಿ ಮುಖ್ಯಮಂತ್ರಿ ದಿವಂಗತ ಧರಂಸಿಂಗ ಕುಟುಂಬವೂ ಒಂದು. ಅದರಲ್ಲೂ ಅಜಯ ಸಿಂಗ್ ಸಾಮಾನ್ಯ ವ್ಯಕ್ತಿಯಲ್ಲ ಅವರೊಬ್ಬ ಶಕ್ತಿ ಎಂದರೆ ತಪ್ಪಾಗಲಾರದು. ಮಾಜಿ ಮುಖ್ಯಮಂತ್ರಿ ಮಗನಾಗಿ ಕ್ಷೇತ್ರದ ಶಾಸಕನಾಗಿ, ಕೆಕೆಆರ್ಡಿಬಿ ಅಧ್ಯಕ್ಷನಾಗಿ ಈ ಭಾಗಕ್ಕೆ ಅನೇಕ ಕೊಡುಗೆ ಅವರು ನೀಡಿದ್ದಾರೆ. ತಾಂತ್ರಿಕ ಮತ್ತು ಸಾಮಾಜಿಕವಾಗಿ ತಮ್ಮದೇ ಆದ ಹಿರಿಮೆ, ಗರಿಮೆ ಹೊಂದಿದವರಾಗಿದ್ದಾರೆ. ಬೇರೆ ರಾಜಕಾರಣಿಗಳಿಗೆ ಹೋಲಿಸಿದರೆ ಪ್ರಸಕ್ತ ವಿದ್ಯಾಮಾನಗಳ ಸಂಪೂರ್ಣ ಮಾಹಿತಿ ಉಳ್ಳವಾಗಿದ್ದಾರೆ. ಯುವ ಜನತೆಯ ಪ್ರೀತಿಗಳಿಸಿದವರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಸಚಿವ ಸ್ಥಾನ ನೀಡುವ ಭರವಸೆಯಲ್ಲೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಕಡೆಗೂ ಹೈಕಮಾಂಡ್ ಹಾಗು ಡಿ.ಕೆ ಶಿವಕುಮಾರ ಅವರು ಸಚಿವ ಸ್ಥಾನ ನೀಡಿದ್ದು ಸಂತಸದ ವಿಷಯ. ಆದರೆ ಅಜಯಸಿಂಗ ಅವರ ಸೇವೆ, ಘನತೆ ಹಾಗೂ ಪರಿಣಿತಿಗೆ ಅನುಗುಣವಾಗುವಂತಹ ಖಾತೆ ನೀಡಬೇಕು. ಇದರಿಂದ ಈ ಭಾಗದ ಅಭ್ಯುದಯಕ್ಕೆ ಒತ್ತು ಕೊಟ್ಟಂತಾಗಬೆಕು ನಾಮಕೆ ವಾಸ್ತೆ ಸಚಿವ ಸ್ಥಾನ ನೀಡಿದರೆ ಕ ಕ ಬಾಗಕ್ಕೆ ಮಲತಾಯಿ ಧೋರಣೆಯನ್ನೆ ಮುಂದುವರೆಸಿದಂತೆ ಆಗುತ್ತದೆ ಹಾಗಾಗಬಾರದು. ಅಂದರೆ ಕೃಷಿ ಖಾತೆ ನೀಡಿದರಂತು ಅನುಕೂಲ ಆಗಬಹುದು. ಒಟ್ಟಿನಲ್ಲಿ ಕ ಕ ಪ್ರದೇಶಕ್ಕೆ ಅನುಕೂಲಕರವಾಗುವಂತಹ ಜವಾಬ್ದಾರಿಯುತವಾದಂತಹ ಖಾತೆ ನೀಡಿ ಕ ಕ ಭಾಗದ ಜನಕ್ಕೆ ನ್ಯಾಯ ಒದಗಿಸಿ ಕೋಡಬೆಕೆಂಬ ಆಗ್ರಹವನ್ನು ಮಾಡಿದ್ದಾರೆ