ಕಲಬುರಗಿ: ಅಫಜಲಪುರ ತಾಲ್ಲೂಕಿನ ಕೋಗನೂರ, ಗುಡೂರ, ಭೈರಾಮಡಗಿ ಮತ್ತು ಮದರಾ (ಬಿ) ಗ್ರಾಮಗಳ ಅರ್ಹ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2025-26ನೇ ಸಾಲಿನ ಬೆಳೆ ವಿಮೆಯ 2ನೇ ಕಂತಿನ ಹಣ ಪಾವತಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಚಂದ್ರಕಾಂತ ಪಾಟೀಲ, ಬಸವಣ್ಣಪ್ಪ ಪಾಟೀಲ, ಶರಣಬಸಪ್ಪ ಪಡಶೆಟ್ಟಿ, ನಿಜಗುಣ ಚಕ್ರವರ್ತಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.