Home ಜಿಲ್ಲೆ ಕಲಬುರಗಿ ಜೂಜಾಟ:9 ಜನರ ಬಂಧನ

ಜೂಜಾಟ:9 ಜನರ ಬಂಧನ

ಕಲಬುರಗಿ,ಆ.10-ತಾಲ್ಲೂಕಿನ ಗಣಜಲಖೇಡ ಗ್ರಾಮದ ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿರುವ ಖುಲ್ಲಾ ಜಾಗೆಯ ಬೇವಿನ ಮರದ ಕೆಳಗೆ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಎಸ್‍ಐ ಶಶಿಕಲಾ, ಸಿಬ್ಬಂದಿಗಳಾದ ಜಗದೀಶ, ಪುಂಡಲಿಕ, ಶಶಿಕಾಂತ, ರಾಜಕುಮಾರ, ಶಿವರಾಜ, ಶ್ರೀನಿವಾಸ, ಶಿವಕುಮಾರ ಅವರು ದಾಳಿ ನಡೆಸಿ 9 ಜನರನ್ನು ಬಂಧಿಸಿದ್ದಾರೆ.
ಓಂಕಾರ್ ನಾಯ್ಕ್, ಸುರೇಶ್ ರಾಠೋಡ್, ಮಲ್ಲಿಕಾರ್ಜುನ ನಾಯ್ಕ್, ಗುಲಾಬ್ ಜಾಧವ್, ಶ್ರೀನಾಥ ರಾಠೋಡ್, ಗುರುಲಿಂಗಪ್ಪ ಬಾಳಿ, ಹಣಮಂತ ಬಾಳಿ, ಬಸವಣ್ಣಪ್ಪ ಬಾಳಿ, ಕಾಶೀನಾಥ ಕರಬಷ್ಠಿ ಎಂಬುವವರನ್ನು ಬಂಧಿಸಿ 5560 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.