
ಕೋಲಾರ,ಸೆ,೧೫- ಜಿಲ್ಲಗ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿ, ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಆಗ್ರಹಿಸಿ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ನಗರದ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರ ಮುಂಭಾಗ ೧೫ನೇ ವರ್ಷದ ಗಣೇಶೋತ್ಸವ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.
ಕಾರ್ಯಕ್ರಮದ ಸ್ಥಳದಲ್ಲಿ ಮಾತನಾಡಿದ ಅವರು, ಕೋಲಾರ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ನೀರಿನ ಸಮಸ್ಯೆ ಪರಿಹಾರಕ್ಕ ಸರ್ಕಾರ ಗಮನಹರಿಸಬೇಕು. ಜಿಲ್ಲಯ ಜನರ ಬಹುದಿನಗಳ ನೀರಿನ ನಿರೀಕ್ಷೆ ಈಡೇರಿಸಲು ಎಲ್ಲರೂ ಪಕ್ಷಾತೀತವಾಗಿ ಒಂದಾಗಬೇಕು ಎಂಬ ಉದ್ದೇಶದಿಂದ ಈ ಗಣೇಶೋತ್ಸವ ನಡೆಯುತ್ತಿದೆ ಎಂದರು.
ಗಣಪತಿ ಪ್ರತಿಷ್ಠಾಪನೆಯಾಗಿದ್ದು, ಇಂದು ಆರತಿ ಹಾಗೂ ವರುಣದೇವರಿಗ ವಿಶೇಷ ಪೂಜೆ ನೆರವೇರಿಸಲಾಗುವುದು. ಸೆ.೧೭ರಂದು ರಂಗೋಲಿ ಸ್ಪರ್ಧ ಆಯೋಜಿಸಿ ವಿಜೇತರಿಗ ಬಹುಮಾನ ವಿತರಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೧೦ ಮಂದಿಗ ಯುವಕರಿಗ ಪ್ರೇರಣಯಾಗುವಂತೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸೆ.೧೮ರಂದು ಅದ್ದೂರಿ ವಿಸರ್ಜನಾ ಮೆರವಣಿಗ ನಡೆಯಲಿದ್ದು, ಗಣೇಶೋತ್ಸವ ತಂಡಗಳು, ವಾದ್ಯಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ.
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದ್ದು, ಪಟಾಕಿ ಸಿಡಿಸಿ, ಆರತಿ ಬಳಗುವ ಮೂಲಕ ಕಾರ್ಯಕ್ರಮಕ್ಕ ಚಾಲನೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ನಾಮಲ್ ಮಂಜು, ಸಾ.ಮಾ. ಬಾಬು, ನಾಗಹರೀಶ್, ಸಂದೀಪ್, ನವೀನ್, ಭರತ್, ಕಿಶೋರ್, ಚಂದ್ರು, ಗೋವಿಂದ, ಸಂಪತ್ ಹಾಗೂ ಓಂಪ್ರಕಾಶ್ ಇದ್ದರು.
































