Home ಜಿಲ್ಲೆ ಕಲಬುರಗಿ ಜೂಜಾಟ: ನಾಲ್ವರ ಬಂಧನ

ಜೂಜಾಟ: ನಾಲ್ವರ ಬಂಧನ

ಕಲಬುರಗಿ,ಆ.5-ನಗರ ಹೊರವಲಯದ ಶರಣ ಸಿರಸಗಿಯ ಸೀಮೆಯ ಉದನೂರ-ಕಣ್ಣಿ ರಸ್ತೆಯ ಪಕ್ಕದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಗುಂಡೇರಾಯ, ಜಗದೀಶ, ಚಂದ್ರಕಾಂತ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಅಬ್ದುಲ್ ರಹೇಮಾನ್, ಶಾಂತಪ್ಪ ಕಡಗಂಚಿ, ದವಲಸಾಬ ಜಮಾದಾರ ಮತ್ತು ಪ್ರಕಾಶ್ ಹಾಳಮಳಿ ಎಂಬುವವರನ್ನು ಬಂಧಿಸಿ 3,500 ರೂ.ನಗದು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.