Home ಜಿಲ್ಲೆ ತುಮಕೂರು ದಬ್ಬೇಗಟ್ಟ ಕೆರೆಗೆ ಮಾಜಿ ಶಾಸಕ ಕೆಎಸ್‌ಕೆ ಗಂಗಾಪೂಜೆ

ದಬ್ಬೇಗಟ್ಟ ಕೆರೆಗೆ ಮಾಜಿ ಶಾಸಕ ಕೆಎಸ್‌ಕೆ ಗಂಗಾಪೂಜೆ

ಚಿಕ್ಕನಾಯಕನಹಳ್ಳಿ, ಸೆ. ೧೩- ಹೇಮಾವತಿ ನೀರಿನಿಂದ ತುಂಬಿ ಕೋಡಿ ಹರಿದ ದಬ್ಬೇಗಟ್ಟ ಕೆರೆಗೆ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಬಾಗಿನ ಅರ್ಪಿಸಿ ಗಂಗಾಪೂಜೆ ನೆರವೇರಿಸಿದರು.


ಹೇಮಾವತಿ ನಾಲೆಯಿಂದ ತಾಲ್ಲೂಕಿನ ೨೬ ಕೆರೆಗಳಿಗೆ ನೀರುಣಿಸುವ ಯೋಜನೆಯಡಿ ಇದೇ ಪ್ರಥಮ ಬಾರಿಗೆ ದಬ್ಬೇಘಟ್ಟ ಕೆರೆಗೆ ನಾಲೆಯ ಮೂಲಕ ಹೇಮಾವತಿ ನೀರು ಹರಿದು ಕೆರೆ ತಿಂಬಿ ಕೋಡಿ ಹರಿದಿದೆ. ಈ ಯೋಜನೆಯನ್ನು ಜಾರಿಗೊಳಿಸಿ, ನೀರಿನ ಅಲೋಕೇಶನ್ ಹಾಗೂ ಅನುದಾನ ಬಿಡುಗಡೆ ಮಾಡಿಸುವಲ್ಲಿ ಹೆಚ್ಚು ಶ್ರಮವಹಿಸಿದ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ರವರಿಗೆ ದಬ್ಬಘಟ್ಟೆ ,ಕಲ್ಲೇನಹಳ್ಳಿ ಸುತ್ತಮುತ್ತ ಗ್ರಾಮಸ್ಥರಿಂದ ಅಭಿನಂಧನೆ ಸಲ್ಲಿಸಲಾಯಿತು.


ಇದಕ್ಕೂ ಮುನ್ನ ಗ್ರಾಮದ ಕೆರೆಯ ಕೋಡಿ ಜಾಗದಲ್ಲಿ ಗ್ರಾಮ ದೇವತೆಗಳಾದ ಶ್ರಿಮರಳಸಿದ್ದೇಶ್ವರಸ್ವಾಮಿ ಹಾಗೂ ಶ್ರೀಮಾತಾ ಕೆಂಪಮ್ಮದೇವಿಯವರ ಉತ್ವವ ಮೂತಿಗಳನ್ನು ಹೊರಡಿಸಿ ಕೆರೆಯ ಸನಿಹಕ್ಕೆ ಕರೆತರಲಾಯಿತು. ಗೋಡೆಕೆರೆ ಮಠದ ಶ್ರೀ ಮೃತುಂಜಯದೇಶೀಕೇಂದ್ರ ಸ್ವಾಮೀಜಿ ಹಾಗೂ ಕುಪ್ಪೂರು-ತಮ್ಮಡಿಹಳ್ಳಿ ಮಠಾಧೀಶರಾದ ಡಾ. ಅಭಿನವ ಮಲ್ಲಿಕಾರ್ಜುನಸ್ವಾಮೀಜಿ ರವರ ಸಮ್ಮುಖದಲ್ಲಿ ಕೆ.ಎಸ್. ಕಿರಣ್‌ಕುಮಾರ್ ಗ್ರಾಮಸ್ಥರೂ ಸೇರಿದಂತೆ ಗಂಗಾಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಸಮರ್ಪಿಸಲಾಯಿತು.


ನಂತರ ಶ್ರೀಮರುಳಸಿದ್ದೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಕೆ.ಎಸ್.ಕಿರಣ್‌ಕುಮಾರ್ ಮಾತನಾಡಿ, ೧೬ ವರ್ಷಗಳ ಹಿಂದೆ ಈ ಯೋಜನೆ ಅಗತ್ಯತೆಯನ್ನು ಅರಿತು ಆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ವೆಗೆ ಹಣ ಬಿಡುಗಡೆಗೊಳಿಸುವಲ್ಲಿ ಹಾಗೂ ಯೋಜನೆಯನ್ನು ಜಾರಿಗೊಳಿಸಿ ಹಣ ಬಿಡುಗಡೆಗೊಳಿಸಲಾಗಿತ್ತು ಎಂದರು.


ನಂತರ ಕಾಮಗಾರಿ ಕೆಲಸಗಳ ವಿಳಂಬದಿಂದಾಗಿ ಈ ಯೋಜನೆ ಪೂರ್ಣಗೊಳ್ಳುವಲ್ಲಿ ವಿಫಲವಾಗಿತ್ತು. ಈ ಸಂದರ್ಭದಲ್ಲಿ ರೈತರ ಸಂಘಟಿತ ಪ್ರತಿಭಟನೆಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸಿ ನವಿಲೆ ಭಾಗದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿದ ಫಲ ದಬ್ಬೇಗಟ್ಟ ಕೆರೆಗೆ ನೀರು ಬಂದು ಕೋಡಿ ಹರಿದಿದೆ. ಇದು ಮುಂದಕ್ಕೆ ಹರಿದು ಮೇಲನಹಳ್ಳಿ ಹಾಗೂ ನವಿಲೆ ಕೆರೆಗೆ ಹರಿದು ಪೂರ್ಣ ಪ್ರಮಾಣದಲ್ಲಿ ತುಂಬಿದರೆ ಅಂತರ್ಜಲ ಉತ್ತಮಗೊಂಡು ಈ ಕೆರೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಕೊಳವೆ ಬಾವಿಯಲ್ಲಿ ನೀರಿನ ಒರತೆ ಹೆಚ್ಚಾಗಲಿದೆ. ಈ ಯೋಜನೆಯು ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಬೇಕು ಎಂದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ. ಲಕ್ಕಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್, ಗ್ರಾಮದ ಜಗದೀಶ್, ನಂದೀಶ್, ಉಮೇಶ್, ಶ್ರಿನಿವಾಸ್, ಕುಮಾರಸ್ವಾಮಿ, ರೈತ ಮುಖಂಡರಾದ ಅಜ್ಜೇನಹಳ್ಳಿ ಶರತ್‌ಕುಮಾರ್, ಸಾವಸೆಟ್ಟಿಹಳ್ಳಿ ಮರುಳಸಿದ್ದಯ್ಯ, ಮೇಲನಹಳ್ಳಿ ನಂದೀಶ್, ಬೆವಿನಹಳ್ಳಿ ಚನ್ನಬಸವಯ್ಯ, ಸಾಸಲು ಮಂಜುನಾಥ್, ಕೆ.ಜೆ. ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.