
ಬೀದರ : ಜೂ 14 : ವಿದ್ಯಾರ್ಥಿಗಳ ಸವಾರ್ಂಗೀಣ ಅಭಿವೃದ್ಧಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹ ಅತ್ಯಂತ ಅವಶ್ಯಕವಾಗಿವೆ ಎಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯ ಡೀನ್‍ರಾದ ಡಾ.ಎಸ್.ವಿ.ಪಾಟೀಲ್ ಅವರು ಹೇಳಿದರು.
ಬೀದರ ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಬಾಗಲಕೋಟನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇತ್ತೀಚಿನಮಹಾವಿದ್ಯಾಲಯದ 18ನೇ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿದ್ದು, ಶೈಕ್ಷಣಿಕ ಸಾಧನೆಗಳೊಂದಿಗೆ ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. ಮುಂದುವರೆದು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದು ವಿಶೇಷ ಸಾಮಥ್ರ್ಯವಿದೆ. ಅದನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು, ತೋಟಗಾರಿಕೆ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳ ಅಳವಡಿಕೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳ ಮೂಲಕ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ಶಿಸ್ತು, ಸಮರ್ಪಣೆ ಮತ್ತು ಪರಿಶ್ರಮದ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕೆಂದು ಕಿವಿ ಮಾತನ್ನು ಹೇಳಿದರು.
ಕಲಬುರಗಿ ಕೃಷಿ ಮಹಾವಿದ್ಯಾಲಯ ಮುಖ್ಯ ಅತಿಥಿಗಳು ಹಾಗೂ ವಿಶ್ರಾಂತ ಡೀನ್ ಅವರು ಮಾತನಾಡಿ, ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಪ್ರಮುಖ ಹಂತವಾಗಿದ್ದು, ಶಿಕ್ಷಣದ ಜೊತೆಗೆ ಶಿಸ್ತು, ನೈತಿಕ ಮೌಲ್ಯಗಳು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯವೆಂದು ತಿಳಿಸಿದರು. ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರವು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ, ಸಂಶೋಧನೆ ಮತ್ತು ನವೀನ ಆವಿಸ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಹಾವಿದ್ಯಾಲಯದಲ್ಲಿ ಶಿಕ್ಷಕರು ನೀಡಿದ ಜ್ಞಾನವನ್ನು ಉತ್ತಮ ರೀತಿಯಲ್ಲಿ ವಿವೇಕದಿಂದ ಉಪಯೊಗಿಸಿಕೊಂಡು ದಕ್ಷತೆ, ಪ್ರಾಮಾಣಿಕತೆಯಿಂದ ರೈತ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾವಿದ್ಯಾಲಯದ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಂದುವರೆದು, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಮತ್ತು ನಾಯಕತ್ವ ಕೌಶಲ್ಯಗಳು ವೃದ್ಧಿಯಾಗುತ್ತವೆ, ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಿದರು.
ಡಾ: ಎಸ್. ವಿ. ಪಾಟೀಲ, ತೋಟಗಾರಿಕೆ ಮಹಾವಿದ್ಯಾಲಯ, ಬೀದರ, ಡಾ: ಮೊಹಮ್ಮದ್ ಫಾರೂಕ, ಪ್ರಾಧ್ಯಾಪಕರು, ವಿದ್ಯಾರ್ಥಿಗಳ ವಸತಿ ನಿಲಯಗಳ ನಿಲಯ ಪಾಲಕರುಗಳಾದ ಶ್ರೀ. ಆಂಜನೇಯ, ಶ್ರೀಮತಿ ಜಾನವಿ ಡಿ.ಆರ್. ಮತ್ತು ವಸತಿ ನಿಲಯಗಳ ಪದಾಧಿಕಾರಿಗಳು 2025-26 ನೇ ಶೈಕ್ಷಣಿಕ ಸಾಲಿನ ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ವಸತಿ ನಿಲಯಗಳ ವಾರ್ಷಿಕೋತ್ಸವದ ನಿಮಿತ್ತ ರಚಿಸಲಾದ "ಸಂಭ್ರಮ" ಎಂಬ ಸ್ಮರಣ ಸಂಚಿಕೆ-2026 ನ್ನು ಲೋಕಾರ್ಪಣೆಗೊಳಿಸಿದರು. ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿರುವ ವಿವಿಧ ಕ್ರೀಡೆ, ಸಾಂಸ್ಕೃತಿಕ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಗಣ್ಯರಿಂದ ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಕು.ಕೀರ್ತಿ ಮತ್ತು -ವಿಜಯಲಕ್ಷಿ??, ತೃತಿಯ ವರ್ಷದ ವಿದ್ಯಾರ್ಥಿನಿಯರು ನಡೆಸಿಕೊಟ್ಟರು. ತದನಂತರ ಸರೆಗಮ ವಿಜೇತರು ಹಾಗೂ ಇಂಡಿಯನ್ ಐಡಿಯಲ್ ಪ್ರಶಸ್ತಿ ಪಡೆದ ಕು. ಶಿವಾನಿ ಶಿವದಾಸ ಸ್ವಾಮಿ ಹಿರೇಮಠ ಮತ್ತು ಸಂಗೀತ ರತ್ನ ಶ್ರೀ ಶಿವದಾಸ ಸ್ವಾಮಿಯವರು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತ ನಾಟ್ಯ, ದೇಶ ಭಕ್ತಿಗೀತೆ, ನಾಟಕ, ಏಕಾಭಿನಯ ಹಾಗೂ ಇನ್ನಿತರೆ ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವುದರ ಮುಖೇನ ಪ್ರೇಕ್ಷಕರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಡಾ. ಮೊಹಮ್ಮದ್ ಫಾರೂಕ ಪ್ರಾಧ್ಯಾಪಕರು, (ತೋಟ ಪಟ್ಟಿ ಬೆಳೆಗಳ ವಿಭಾಗ) ಮತ್ತು ಸಿಬ್ಬಂದಿ ಸಲಹೆಗಾರರು, ಡಾ. ಶ್ರೀನಿವಾಸ ಎನ್. ಪ್ರಾಧ್ಯಾಪಕರು, ಡಾ. ರಾಜಕುಮಾರ ಎಮ್. ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು, ಸೂರ್ಯ ವಿದ್ಯಾರ್ಥಿಗಳ ವಸತಿ ನಿಲಯ ಸಂಘದ ಪ್ರತಿನಿಧಿಗಳಾದ ಮನೋಜ ಪಾಟೀಲ, ಪ್ರಧಾನ ಕಾರ್ಯದರ್ಶಿ, ಅಲೋಕ ಪಾಟೀಲ, ಜಂಟಿ ಮತ್ತು ಕ್ರೀಡಾ ಕಾರ್ಯದರ್ಶಿ, ಭಗವಂತರಾಯ, ಭೋಜನಾಲಯ ಕಾರ್ಯದರ್ಶಿ, ಹÀರ್ಷಕುಮಾರ ಆರೋಗ್ಯ ಕಾರ್ಯದರ್ಶಿ ಆಯುಷ ಶ್ರೀವಾತ್ಸವ, ಸಾಂಸ್ಕೃತಿ ಕಾರ್ಯದರ್ಶಿ ಮತ್ತು ವಿಜಯಾ ವಿದ್ಯಾರ್ಥಿನಿಯರ ವಸತಿ ನಿಲಯ ಸಂಘದ ಪ್ರತಿನಿಧಿಗಳಾದ ದಿವ್ಯಾ ಉಪ್ಪೆ, ಪ್ರಧಾನ ಕಾರ್ಯದರ್ಶಿ, ಕೀರ್ತಿ, ಜಂಟಿ ಕಾರ್ಯದರ್ಶಿ, ವೈಷ್ಣವಿ, ಭೋಜನಾಲಯ ಕಾರ್ಯದರ್ಶಿ, ಸಾನಿಯಾ, ಅಧ್ಯಯನ ಕಾರ್ಯದರ್ಶಿ, ಕವಿತಾ, ಆರೋಗ್ಯ ಕಾರ್ಯದರ್ಶಿ, ಸಂಜನಾ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ತರಗತಿವಾರು ವರ್ಗ ಪ್ರತಿನಿಧಿಗಳಾದ ಬಸವರಾಜ ರೇಷ್ಮೆ ಮತ್ತು ದೀಪಿಕಾ, ದ್ವೀತಿಯ ವರ್ಷ, ಅಲೋಕ ಪಾಟೀಲ ಮತ್ತು ಜಯಶ್ರೀ, ತೃತೀಯ ವರ್ಷ, ಮನೋಜ ಪಾಟೀಲ ಮತ್ತು ಸಂಜನಾ, ಅಂತಿಮ ವರ್ಷ ಮತ್ತು ಇನ್ನಿತರೆ ವಿದ್ಯಾರ್ಥಿಗಳು ವಿವಿಧ ಸಮಿತಿಗಳಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆಕೈಗೊಂಡು ಕಾರ್ಯಕ್ರಮಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣೀಭೂತರಾದರು. ಕು.ದಿವ್ಯಾ ಮತ್ತು ಐಶ್ವರ್ಯ, ಅಂತಿಮ ವರ್ಷದ ವಿದ್ಯಾರ್ಥಿನಿಯರು ಮಹಾವಿದ್ಯಾಲಯದ ವಾರ್ಷಿಕ ವರದಿಯನ್ನು ಹಾಗೂ ಕು. ಮನೋಜ ಪಾಟೀಲ, ಪ್ರಧಾನ ಕಾರ್ಯದರ್ಶಿಗಳು ವಸತಿ ನಿಲಯಗಳ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ಕು. ಪೂಜಾ ಮತ್ತು ಸಂಗಡಿಗರು ಭರತನಾಟ್ಯ ಮಾಡಿದರು. ಕು. ವೈಷ್ಣವಿ, ತೃತಿಯ ವರ್ಷ ವಿದ್ಯಾರ್ಥಿನಿ ಸ್ವಾಗತಿಸಿದರು, ಕು. ಸುಮಯ್ಯಾ, ತೃತಿಯ ವರ್ಷ ವಂದಿಸಿದರು. ಕು. ಫಲಕನಾಜ್ ಮತ್ತು ನಿತೀನ ಮಲ್ಲಿ ತೃತಿಯ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.


























