
ಮಾಲೂರು,ಜು.೨೮: ಕೃಷಿ ಇಲಾಖೆ ಹಾಗೂ ಇಂಡಸ್ ಇಂಡ್ ಕಂಪನಿಯಿಂದ ಸಿದ್ಧಪಡಿಸಲಾದ ಬೆಳೆ ವಿಮೆ ಪ್ರಚಾರ ವಾಹನಕ್ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಿ.ಚಂದ್ರಪ್ಪ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕಿ ದಿವ್ಯ ತಾಲೂಕು ಪಂಚಾಯಿತಿ ಕಚೇರಿಯ ಆವರಣದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿಪಿ ಚಂದ್ರಪ್ಪ,ತಾಲೂಕಿನಲ್ಲಿ ಬೆಳೆವಿಮೆ ಕುರಿತು ರೈತರಿಗೆ ಸಮಗ್ರ ಮಾಹಿತಿ
ಒದಗಿಸಿ, ನೋಂದಣಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ವಾಹನವು ತಾಲೂಕಿನಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದರು.
ಈ ಬಾರಿ ಸೂಪರ್ ಎಲ್-ನಿನೋ ಪ್ರಭಾವದಿಂದಾಗಿ ಜುಲೈ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ ಶೇ.೮೮ ರಷ್ಟು ಮಳೆ ಕೊರತೆಯಾಗಿದೆ.ಇದರ ಪರಿಣಾಮವಾಗಿ ತಾಲ್ಲೂಕಿನಲ್ಲಿ ಕೆಲವು ರೈತರು ಮಾತ್ರ ಬಿತ್ತನೆ ಕಾರ್ಯ ಮಾಡಿದ್ದಾರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಳೆ ಕೊರತೆಯಿಂದ ಉಂಟಾಗಬಹುದಾದ ಬೆಳೆ ನಷ್ಟವನ್ನು ತಡೆಯಲು ಹಾಗೂ ರೈತರಿಗೆ ಆರ್ಥಿಕಭದ್ರತೆ ಒದಗಿಸಲು ಬೆಳೆ ವಿಮೆ ಮಾಡಿಸುವುದು ಅತ್ಯಗತ್ಯವಾಗಿದೆ ಎಂದರು.
ಸರ್ಕಾರವು ಈಗಾಗಲೇ ೨೦೨೬ ಮುಂಗಾರು ಹಂಗಾಮಿಗೆ ವಿವಿಧ ಬೆಳೆಗಳಿಗೆ ವಿಮೆ ಪ್ರಸ್ತಾವನೆಗಳನ್ನು ಸಲ್ಲಿಸಲು ಪ್ರೀಮಿಯಂ ಮೊತ್ತ ಹಾಗೂ ಅಂತಿಮ ದಿನಾಂಕಗಳನ್ನು
ಘೋಷಿಸಿ ಅಧಿಸೂಚನೆ ಹೊರಡಿಸಿದೆ. ರೈತರು ನಿಗದಿತ ಅಂತಿಮ ದಿನಾಂಕದೊಳಗೆ ತಮ್ಮ ವ್ಯಾಪ್ತಿಯ ಬ್ಯಾಂಕ್‌ಗಳು, ಕರ್ನಾಟಕ ಒನ್ ಗ್ರಾಮ-ವನ್‌ಅಥವಾ ಸಿ.ಎಸ್.ಸಿ
ಕೇಂದ್ರಗಳನ್ನು ಸಂಪರ್ಕಿಸಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಮಂಜುನಾಥ್ ಅನುಷ ಸಂಧ್ಯಾ ಸಿಬ್ಬಂದಿ ವರ್ಗ, ವಿಮಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ರೈತರು ಭಾಗವಹಿಸಿದ್ದರು.


































