
ನವದೆಹಲಿ, ಜೂ,೧೨- ರಾಷ್ಟ್ರ ರಾಜಧಾನಿ ದೆಹಲಿಯ ತುಘಲಕಾಬಾದ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದು ಬೆಂಕಿ ಅವಘಡದಲ್ಲಿ ೮ ಮಂದಿಯನ್ನು ರಕ್ಷಿಸಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ
ತುಘಲಕಾಬಾದ್ ವಿಸ್ತರಣಾ ಪ್ರದೇಶದ ಮಧ್ಯಾನ್ ಮಾರ್ಗದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ, ತಕ್ಷಣ ರಕ್ಷಣಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾದರೂ ಅಷ್ಟರೊಳಗೆ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಅವಘಡದಲ್ಲಿ ಹಲವು ಮಂದಿ ಗಾಯಗೊಂಡಿದ್ದು ಅವರನ್ನೆಲ್ಲಾ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಓಖ್ಲಾ ಅಗ್ನಿಶಾಮಕ ಠಾಣೆ -೧ ರ ವ್ಯಾಪ್ತಿಗೆ ಬರುವ ಮಧ್ಯಾನ್ ಮಾರ್ಗದಲ್ಲಿರುವ ನಯಾ ತಾರಾ ಅಪಾರ್ಟ್‌ಮೆಂಟ್ ಬಳಿಯ ಗಾಲಿ ನಂಬರ್ ೧ ರಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ
ದೆಹಲಿ ಅಗ್ನಿಶಾಮಕ ದಳ ಎಂಟು ಜನರನ್ನು ರಕ್ಷಿಸಿ, ಕೇಂದ್ರೀಕೃತ ಅಪಘಾತ ಮತ್ತು ಆಘಾತ ಸೇವೆಗಳ ಸಹಾಯದಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ .ಕಟ್ಟಡದೊಳಗೆ ನಿಲ್ಲಿಸಿದ್ದ ಕೆಲವು ವಾಹನಗಳು ಮತ್ತು ಬೈಕ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ
“ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇವು ತುಂಬಾ ಜನದಟ್ಟಣೆಯ ಗಲ್ಲಿಗಳಾಗಿರುವ ಹಿನ್ನೆಲೆಯಲ್ಲಿ ಹಲವು ಕಡೆ ಹರಡಿದ್ದು ಘಟನೆಗೆ ಕಾರಣವಾಗಿದೆ, ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ
ಬೆಳಗಿನ ಜಾವ ೨.೩೦ರ ವೇಳೆ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಉಂಟಾಗಿ ಕಟ್ಟಡದೊಳಗೆ ಜನರು ಸಿಲುಕಿಕೊಂಡು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ, ಬೆಳಗಿನ ಜಾವ ೩.೪೫ ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಮತ್ತು ಬೆಳಗಿನ ಜಾವ ೪.೦೦ ರ ಹೊತ್ತಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಘಲಕಾಬಾದ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಲ್ವಿಯಾ ನಗರದ ಹೋಟೆಲ್‌ನಲ್ಲಿ ೨೨ ಜೀವಗಳನ್ನು ಬಲಿ ಪಡೆದ ಭಾರೀ ಬೆಂಕಿ ಸಂಭವಿಸಿದ ಕೆಲವು ದಿನಗಳ ನಂತರ, ಹೆಚ್ಚಾಗಿ ವಿದೇಶಿಯರು ಸಾವನ್ನಪ್ಪಿದ್ದರು ಆ ಘಟನೆ ಬಳಿಕ ನಲ್ವಿಯಾ ನಗರ ಬೆಂಕಿಯ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

























