Home ಮುಖಪುಟ ಸುದ್ದಿ ರಷ್ಯಾದಿಂದ ತೈಲ ಖರೀದಿ ಭಾರತಕ್ಕೆ ಫಿನ್ ಲ್ಯಾಂಡ್ ಬೆಂಬಲ

ರಷ್ಯಾದಿಂದ ತೈಲ ಖರೀದಿ ಭಾರತಕ್ಕೆ ಫಿನ್ ಲ್ಯಾಂಡ್ ಬೆಂಬಲ

ವದೆಹಲಿ,ಜೂ.೧೩- ರಷ್ಯಾದಿಂದ ತೈಲ ಖರೀದಿ ಮಡುವ ಕ್ರಮವನ್ನು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಸಮರ್ಥಿಸಿಕೊಂಡ ಬೆನ್ನಲ್ಲೇ ಭಾರತದ ಬೆಂಬಲಕ್ಕೆ ಫಿನ್‌ಲ್ಯಾಂಡ್ ನಿಂತಿದೆ

ಫಿನ್‌ಲ್ಯಾಂಡ್‌ನ ವಿದೇಶಾಂಗ ಸಚಿವೆ ಎಲಿನಾ ವಾಲ್ಟೋನೆನ್ ಪ್ರತಿಕ್ರಿಯಿಸಿ ಬೆಲೆ ಮಿತಿ ನೀತಿಯಲ್ಲಿ ತೈಲ ಖರೀದಿ ಮಾಡುವ ಅವಕಾಶ ಮತ್ತು ಮುಕ್ತ ಸ್ವಾತಂತ್ರ್ಯ ಭಾರತಕ್ಕಿದೆ ಎಂದಿದ್ದಾರೆ. ಈ ಮೂಲಕ ರಷ್ಯಾದ ತೈಲ ಖರೀದಿಯ ಕುರಿತು ಭಾರತಕ್ಕೆ ಫಿನ್‌ಲ್ಯಾಂಡ್‌ನಿಂದ ಅನಿರೀಕ್ಷಿತ ಬೆಂಬಲ ದೊರೆತಿದೆ.

ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುಲ್ಟರಾಂಟಾ ಮಾತುಕತೆಯಲ್ಲಿ ನಡೆದ ಫಲಕ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಪಾಶ್ಚಿಮಾತ್ಯ ದೇಶಗಳು ಪರಿಚಯಿಸಿದ ತೈಲ ಬೆಲೆ ಮಿತಿಯ ಚೌಕಟ್ಟಿನೊಳಗೆ ಭಾರತ ಕಾರ್ಯನಿರ್ವಹಿಸಿದೆ ಎಂದು ಹೇಳಿದ್ದಾರೆ

ಯುಎಇ ಸಹಾಯಕ ವಿದೇಶಾಂಗ ಸಚಿವೆ ಲಾನಾ ನುಸ್ಸೀಬೆಹ್ ಅವರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದ ಕಲ್ಟರಾಂಟಾ ಮಾತುಕತೆಯಲ್ಲಿ ಪಾಶ್ಚಿಮಾತ್ಯ ಬೆಲೆ ಮಿತಿ ಕಾರ್ಯವಿಧಾನ ದೇಶಗಳು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ಸಂಪೂರ್ಣವಾಗಿ ತಡೆಯಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ

ತೈಲ ಬೆಲೆ ಮಿತಿಯನ್ನು ಪರಿಚಯಿಸಿದಾಗ, ಜಗತ್ತು ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಷೇಧಿಸಲಿಲ್ಲ. ತೈಲ ಮಾರುಕಟ್ಟೆ ಅಡ್ಡಿಪಡಿಸುವುದು ಸಂಪೂರ್ಣ ಉದ್ದೇಶವಾಗಿರಲಿಲ್ಲ, ರಷ್ಯಾ ಅದರಿಂದ ಭಾರಿ ಲಾಭ ಗಳಿಸದಂತೆ ತೈಲ ಪೂರೈಕೆ ಮುಂದುವರಿಸುವುದು ಇದರ ಉದ್ದೇಶವಾಗಿತ್ತು” ಎಂದು ಮಾಹಿತಿ ನೀಡಿದ್ದಾರೆ

ಜೈಶಂಕರ್ ಭಾರತದ ಇಂಧನ ನೀತಿಯನ್ನು ದೃಢವಾಗಿ ಸಮರ್ಥಿಸಿಕೊಂಡರು ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಭಾರತ, ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುತ್ತಿರುವುದರ ಬಗ್ಗೆ ಟೀಕೆ ಎದುರಿಸುತ್ತಿರುವ ನಡುವೆ ಈ ಹೇಳಿಕೆ ಬಂದಿದೆ

ರಷ್ಯಾದಿಂದ ಭಾರತದ ಆಮದುಗಳ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜೈಶಂಕರ್, ಇಂಧನ ಖರೀದಿಗಳು ರಾಜಕೀಯ ಹೊಂದಾಣಿಕೆಗಳಿಗಿಂತ ಪ್ರಾಯೋಗಿಕ ಪರಿಗಣನೆಗಳಿಂದ ಮಾರ್ಗದರ್ಶಿಸಲ್ಪಟ್ಟಿವೆ ಎಂದು ಹೇಳಿದ್ದಾರೆ

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬಳಿಕ ರಷ್ಯಾದಿಂದ ಎಲ್ಲಾ ಮಾದರಿಯ ತೈಲ ಖರೀದಿ ಮಾಡದಂತೆ ಅಮೆರಿಕ ಸೇರಿದಂತೆ ಜಾಗತಿಕ ರಾಷ್ಟ್ರಗಳು ನಿರ್ಧಾರ ಕೈಗೊಂಡ ನಡುವೆಯೂ ಭಾರತ, ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ.