
ಕಲಬುರಗಿ,ಸೆ.26: ಶಾರದಾ ಶಿಕ್ಷಣ ಸಂಸ್ಥೆಯ ಆರಾಧನಾ ಪದವಿಪೂರ್ವ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಶಹಬಜಾರ್ ಕಲಬುರ್ಗಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಅಂಗವಾಗಿ ಶೈಕ್ಷಣಿಕ ಸಾಮಾಜಿಕವಾಗಿ ಸಮಾಜದ ಸುಧಾರಣೆಯಲ್ಲಿ ವಿಶೇಷ ಕೊಡುಗೆ ನೀಡಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಮಹಾಗಾಂವ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಸಹ ಪ್ರಾಧ್ಯಾಪಕ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅನಿಲ ಕುಮಾರ ಹಾಲು ಅವರು ಮಾತನಾಡಿ,
ನಮ್ಮ ರಾಷ್ಟ್ರ ಯುವಕರ ರಾಷ್ಟ್ರ ಯುವಕರು ಎಂತಹ ಕಷ್ಟ ಕೆಲಸವನ್ನಾದರೂ ಮಾಡಬಹುದು ಅಂದುಕೊಂಡದ್ದನ್ನು ಸಾಧಿಸಬಹುದು ಅಂತಹ ಶಕ್ತಿ ಸಾಮಥ್ರ್ಯ ಯುವಕರಲ್ಲಿ ಇರುತ್ತದೆ ಅದರೊಂದಿಗೆ ಎನ್ ಎಸ್ ಎಸ್ ಕಾರ್ಯವು ಕೂಡ ನಮ್ಮ ಜೀವನ ಶೈಲಿಯನ್ನು ಬದಲಿಸುತ್ತದೆ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ಇದು ಅತ್ಯಂತ ಪ್ರಮುಖವಾಗಿದೆ ಎಂದು ಮಾತನಾಡಿದರು. ಸನ್ಮಾನಿತರಾದ ದೈಹಿಕ ಶಿಕ್ಷಕ ಭೋಜನಗೌಡ ಮಾತನಾಡಿ ಸದೃಢ ಮನಸ್ಸಿಗೆ ಸದೃಢ ದೇಹ ಬೇಕು ದಿನನಿತ್ಯ ಒಬ್ಬ ವಿದ್ಯಾರ್ಥಿ ಕನಿಷ್ಠ ಎರಡು ತಾಸುಗಳ ಕಾಲ ಆಟವಾಡಬೇಕು ದೈಹಿಕ ದಂಡನೆ ಯಾಗಬೇಕು ಅಂದಾಗ ಮಾತ್ರ ನಮ್ಮ ಶರೀರ ಆರೋಗ್ಯವಂತವಾಗಿರಲು ಸಾಧ್ಯವಾಗುತ್ತದೆ ಎಂದು ನುಡಿದರು. ಚಾಂದ್ ಬಿಬಿ ಕಾಲೇಜ್ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಮಲ್ಲಿಕಾರ್ಜುನ್ ಶರಣಪ್ಪ ಡೊಣ್ಣೂರು ಅವರು ಮಾತನಾಡಿ ಒಂದು ರಾಷ್ಟ್ರ ಆರ್ಥಿಕ ಸಾಮಾಜಿಕ ರಾಜಕೀಯವಾಗಿ ಸದೃಢವಾಗಬೇಕಾದರೆ ಶಿಕ್ಷಣ ಅತಿ ಮುಖ್ಯ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಪ್ರತಿಭಾವಂತರಾಗಿರುತ್ತಾರೆ. ಆ ಪ್ರತಿಭೆಯನ್ನು ಉತ್ತಮವಾಗಿ ಬಳಕೆ ಮಾಡಿಕೊಂಡು ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂಬ ಮಾತು ನುಡಿದರು.
ಸಾಧಕರಾದ ಅಲಂಕಾರ ರಾಕೇಶ ರವರು ಸನ್ಮಾನ ಸ್ವೀಕರಿಸಿದರು. ಕೆರೆ ಬೋಸಗಾ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಪಾಟೀಲ್ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಡ ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡೆದುಕೊಂಡು ಯುಪಿಎಸ್ಸಿ ಹಾಗೂ ಇಂಜಿನಿಯರಿಂಗ್ ನಂತರ ಉತ್ತಮ ಶಿಕ್ಷಣ ಪಡೆದು ಸಮಾಜದ ಉತ್ತುಂಗ ಶಿಖರವನ್ನೇರಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅದೇ ರೀತಿ ದೈಹಿಕ ಶಿಕ್ಷಕ ಬಸವರಾಜ್ ಹಾಗೂ ಸಾವಳಗಿ ಬಿ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶ ಶರಣಪ್ಪ ಜಾಣೆ ಸಾಧಕರ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳು ಸಮಯ ಪರಿಪಾಲನೆ ಅತಿ ಮುಖ್ಯವಾಗಿದೆ ಪ್ರತಿಯೊಂದು ಕ್ಷಣವು ಅತಿ ಅಮೂಲ್ಯವಾದದ್ದು ಆ ಸಮಯವನ್ನು ವ್ಯರ್ಥ ಮಾಡದೆ ವಿದ್ಯಾರ್ಥಿಗಳು ನಿರಂತರವಾಗಿ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಬೇಕೆಂದು ಕಿವಿಮಾತು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾರದಾ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ರಾಜಕುಮಾರ ಗಾಂಗಜಿ , ಆರಾಧನಾ ಕಾಲೇಜು ಆಡಳಿತ ಅಧಿಕಾರಿ ಭೀಮರಾವ್ ಪಾಟೀಲ್ ಉಪಸ್ಥಿತರಿದ್ದರಉ. ಅರ್ಪಿತಾ ಕೆ ಪಾಟೀಲ್ ಸ್ವಾಗತ ಕೋರಿದರು. ಎನ್ ಎಸ್ ಎಸ್ ಅಧಿಕಾರಿ ಡಾ. ಅಂಬಾರಿ ಹಾಗರಗಿ ಪ್ರಾಸ್ತಾವಿಕ ನುಡಿದರು, ಕನ್ನಡ ಉಪನ್ಯಾಸಕರಾದ ರೋಹಿಣಿ ಸೂಗುರ ವಂದನಾರ್ಪಣೆಯನ್ನು ಸಲ್ಲಿಸಿದರು, ಕಾರ್ಯಕ್ರಮದ ಸಂಚಾಲನೆಯನ್ನು ಕಾಶಿನಾಥ್ ಪಾಟೀಲ್ ನಡೆಸಿಕೊಟ್ಟರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇತನ್ ಕುಮಾರ್ ಗಾಂಗಜಿ ವಹಿಸಿದ್ದರು. ಅವರು ಮಾತನಾಡಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಸ್ಥಳೀಯವಾಗಿಯೂ ಕೂಡ ಇಂಗ್ಲೀಷ್ ವಿಷಯದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸಿ ನಿರಂತರವಾಗಿ ನಮ್ಮ ಭಾಷೆಯನ್ನು ಪ್ರೀತಿಸುವುದರೊಂದಿಗೆ ಇಂಗ್ಲಿಷ್ ಭಾಷೆಯನ್ನ ಉತ್ತಮವಾಗಿ ಕಲಿತರೆ ಭವಿಷ್ಯದಲ್ಲಿ ಹಲವಾರು ದಾರಿಗಳು ಉಪಜೀವನಕ್ಕೆ ದೊರೆಯುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಾಧಕರ ವೈಯಕ್ತಿಕ ಪರಿಚಯವನ್ನು, ದೈಹಿಕ ಶಿಕ್ಷಕ ರೇವಣಸಿದ್ದಪ್ಪ ಇವಣಿ , ಉಪನ್ಯಾಸಕರಾದ ಸೆಟವಾಜಿ ಜೊಮಿ ವಾಲೆ, ಶಂಕರ್ ಬಂಡಿಗರ್, ಪ್ರಭಾವತಿ ಕೊರಳ್ಳಿ ಸಾಧಕರ ಪರಿಚಯವನ್ನು ಮಾಡಿಕೊಟ್ಟರು. ವಂದನಾರ್ಪಣೆಯೊಂದಿಗೆ ಈ ಕಾರ್ಯಕ್ರಮ ಯಶಸ್ವಿಗೊಂಡಿತು.























