Home ಜಿಲ್ಲೆ ಬೆಂಗಳೂರು ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿಗಳು ಪ್ರತಿ ದಿನ ಓಪನ್

ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿಗಳು ಪ್ರತಿ ದಿನ ಓಪನ್

Oplus_16908288

ದೇವನಹಳ್ಳಿಜು೨೯:ಜುಲೈ ತಿಂಗಳ ಅಂತ್ಯದೊಳಗೆ ಪಡಿತರ ಚೀಟಿದಾರರಿಗೆ ಪಡಿತರ ಅಕ್ಕಿ, ಧಾನ್ಯ ವಿತರಿಸಿ ವಿತರಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕಿರುವುದರಿಂದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಜು.೩೧ ರವರೆಗೆ ಪ್ರತಿ ದಿನ ಕಡ್ಡಾಯವಾಗಿ ಬೆಳಿಗ್ಗೆ ೦೬.೦೦ ಗಂಟೆಯಿಂದ ರಾತ್ರಿ ೧೦.೦೦ ತೆರೆದು ಪಡಿತರ ವಿತರಣೆ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚಿಸಿದೆ.


ನ್ಯಾಯಬೆಲೆ ಅಂಗಡಿಗಳು ಇಲಾಖೆ ಸೂಚನೆಯಂತೆ ಕಾರ್ಯ ನಿರ್ವಹಣಾ ಅವಧಿಯನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಲ್ಲಾ ಅರ್ಹ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ದಾನ್ಯವನ್ನು ಸಂಪೂರ್ಣವಾಗಿ ಹಾಗೂ ಕಡ್ಡಾಯವಾಗಿ ವಿತರಿಸುವುದನ್ನು ಖಚಿತ ಪಡಿಸಿಕೊಳ್ಳುವಂತೆ ತಮ್ಮ ವ್ಯಾಪ್ತಿಯ ಆಹಾರ ಶಿರಸ್ತೆದಾರರು/ಆಹಾರ ನಿರೀಕ್ಷಕರಿಗೆ ಸೂಚಿಸಲಾಗಿದೆ.


ನ್ಯಾಯಬೆಲೆ ಅಂಗಡಿಗಳು ಸಮಯ ಪಾಲಿಸದೇ, ಪಡಿತರ ಪಡೆಯದೇ ಇರುವವವರು ತಾಲ್ಲೂಕಿನ ಆಹಾರ ಶಾಖೆಯ ಆಹಾರ ಶಿರಸ್ತೇದಾರ್/ಆಹಾರ ನಿರೀಕ್ಷಕರನ್ನು ಹಾಗೂ ದೂರವಾಣಿ ಸಂಖ್ಯೆ: ದೇವನಹಳ್ಳಿ-೯೪೪೯೨೬೯೦೦೧,ದೊಡ್ಡಬಳ್ಳಾಪುರ-೯೯೮೦೧೨೬೩೫೯, ನೆಲಮಂಗಲ-೯೦೩೬೪೩೪೫೫೨, ಹೊಸಕೋಟೆ-೯೮೪೪೦೨೯೬೪೪ ಯನ್ನು ಸಂಪರ್ಕಿಸಬಹುದು.


ಪಡಿತರ ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ ೧೯೫೫ ಹಾಗೂ ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ಆದೇಶ-೨೦೧೬ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು, ಹಾಗೂ ಸಾರ್ವಜನಿಕರು ಪಡಿತರ ವಿತರಣೆ ವ್ಯವಸ್ಥೆಯು ಸುಗಮವಾಗಿ ನಡೆಯಲು ಸಹಕರಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.