
ನವಲಗುಂದ,ಸೆ.೯: ಇಂದಿನ ಒತ್ತಡದ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲಾ ಒಂದು ವೈಪರೀತ್ಯ ಕಾಣುತ್ತಿದ್ದೇವೆ. ಪ್ರತಿಯೊಬ್ಬರು ಎರಡ್ಮೂರು ತಿಂಗಳಿಗೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದ ಆರೋಗ್ಯ ರಕ್ಷಣೆಯ ಜತೆಗೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗುರುಪ್ರಸಾದ ದೇಸಾಯಿಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ಸಹಕಾರಿ ದುರಿಣರು ಹಾಗೂ ಮಾಜಿ ಶಾಸಕರಾದ ಲಿಂ ಶಂಕರಗೌಡ. ವಿ. ಪಾಟೀಲ (ಶಲವಡಿ) ೨೫ನೇ ಪುಣ್ಯಸ್ಮರಣೆ, ಇವರ ಧರ್ಮಪತ್ನಿ ಲಿಂ ಲಕ್ಷಿ÷್ಮÃಬಾಯಿ ಶಂಕರಗೌಡರು. ಪಾಟೀಲ ೧೨ನೇ ಪುಣ್ಯಕ್ಕರಣೆ ಹಾಗೂ ಲಿಂ. ದೇಸಾಯಿಗೌಡ.ಶಂ. ಪಾಟೀಲ ೬ನೇ ಪುಣ್ಯಸ್ಮರಣೆ ಹಾಗೂ ೩೫ನೇ ಉಚಿತ ನೇತ್ರ ತಪಾಸಣೆ ಮತ್ತು ಶಸ್ತç ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಟಿ ಎಚ್ ಓ ಡಾ. ಎನ್ ಬಿ ಕರ್ಲವಾಡ ಹಾಗೂ ಡಾ. ರೂಪಾ ಕಿಣಗಿ ಮಾತನಾಡಿ ಕಣ್ಣು ಮಾನವನ ದೇಹದ ಅತೀ ಸೂಕ್ಷ÷್ಮವಾದ ಅಂಗ. ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಬಡ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಅನುಕೂಲವಾಗಿವೆ ಎಂದರು.
ಗಣೇಶ ಗಾಂಜಿ, ನಾಗನಗೌಡ ಪಾಲಾಕ್ಷಿಗೌಡ್ರು, ಬಸವರಾಜ ನರಗುಂದ,ರುದ್ರಪ್ಪ ಮನಕವಾಡ, ಬಸನಗೌಡರು ಕುರಹಟ್ಟಿ, ರಾಯನಗೌಡ ಪಾಟೀಲ, ವಿ ಸಿ ಪಾಟೀಲ, ಸೋಮಣ್ಣ ಬಳಿಗಾರ, ಪ್ರಕಾಶ ಶಿಗ್ಲಿ ಸೇರಿದಂತೆ ಹುಬ್ಬಳ್ಳಿ ನವನಗರದಲ್ಲಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮ ಹಾಗೂ ಹುಬ್ಬಳ್ಳಿಯ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಸಿಬ್ಬಂದಿಗಳು ಇದ್ದರು.























