Home ಜಿಲ್ಲೆ ಬೆಂಗಳೂರು ಹಾಲು ಬೆಲೆ ಹೆಚ್ಚಳದ ನಿರೀಕ್ಷೆ

ಹಾಲು ಬೆಲೆ ಹೆಚ್ಚಳದ ನಿರೀಕ್ಷೆ

ಮಾಲೂರು, ಸೆ. ೨೯: ಹಾಲು ಉತ್ಪಾದಕರು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಗುಣಮಟ್ಟದ ಹಾಲನ್ನು ನೀಡುವುದರಿಂದ ಸಂಘಗಳು ಹಾಗೂ ಒಕ್ಕೂಟವು ಲಾಭದಾಯಕವಾಗುತ್ತದೆ. ಹಾಲು ಉತ್ಪಾದಕರು ಹಾಲನ್ನು ಉತ್ಪಾದಿಸಲು ವೆಚ್ಚ ಹೆಚ್ಚಾಗುತ್ತಿರುವುದರಿಂದ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದ ಹಿನ್ನೆಲೆ, ಶೀಘ್ರದಲ್ಲಿಯೇ ರೈತರು ಉತ್ಪಾದಿಸುವ ಹಾಲಿನ ಬೆಲೆಯನ್ನು -೧೦ ಹೆಚ್ಚಳ ಮಾಡುವ ನಿರೀಕ್ಷೆ ಇದೆ ಎಂದು ಶಾಸಕ ಹಾಗೂ ಕೋಮುಲ್ ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ ಹೇಳಿದರು.


ತಾಲೂಕಿನ ಸಂತೆಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಾದ್ಯಂತ ಹೈನುಗಾರಿಕೆ ಉದ್ಯಮಿಯನ್ನು ಅವಲಂಬಿಸಿರುವ ಹಾಲು ಉತ್ಪಾದಕರಿಗೆ ಒಕ್ಕೂಟವು ಹಲವಾರು ಸವಲತ್ತುಗಳನ್ನು ಒದಗಿಸಿದೆ. ಇತ್ತೀಚಿನ ದಿನಗಳಲ್ಲಿ ಹಾಲು ಉತ್ಪಾದನೆಗೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ರೈತರ ಹಾಲಿಗೆ ಅತ್ತರುಗಳನ್ನು ನೀಡುವಂತೆ ಒಕ್ಕೂಟಗಳು ಹಾಗೂ ಕೆಎಂಎಫ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿಯೇ ಮುಖ್ಯಮಂತ್ರಿಗಳು ಹಾಲಿನ ದರವನ್ನು ಏರಿಸಲು ನಿರ್ಧರಿಸಿದ್ದಾರೆ, ಇದು ಹಾಲು ಉತ್ಪಾದಕರಿಗೆ ಅನುಕೂಲ ಆಗಲಿದೆ.


ಇಲ್ಲಿನ ಸಂತೆಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘವು ಪ್ರಸ್ತುತ ೨೦೦೦ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಬಿಎಮ್‌ಸಿ ಸಹ ಸಂಸ್ಥೆ ನೀಡಲಾಗಿದೆ. ೭,೪೨,೨೨೭ ನಿವ್ವಳ ಲಾಭ ಪಡೆದು ೧೮,೮೯,೬೬೯ ಉಳಿತಾಯ ವ್ಯಾಪಾರ ಲಾಭ ೧೫ ಲಕ್ಷರೂ. ೨೫೦ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರಿಂದ ಮಾಸ್ತಿ ಹಾಗು ದಿನ್ನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘಗಳು ೧ ಕೋಟಿ ಲಾಭದ ಹಣವನ್ನು ಮಾಡಿವೆ.


ಕೋಡೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘವು ಲಾಭದ ಹಣದಲ್ಲಿ ಹಾಲು ಉತ್ಪಾದಕರಿಗೆ ಹಸುಗಳನ್ನು ನೀಡಿ ಹೈನುಗಾರಿಕೆ ಉದ್ಯಮಿಗೆ ಸಹಕಾರ ನೀಡುತ್ತಿದೆ. ಒಕ್ಕೂಟವು ಸಹ ಹಾಲು ಉತ್ಪಾದನೆಗೆ ಹಲವಾರು ಸವಲತ್ತುಗಳನ್ನು ಅನುಮೋದಿಸಿದೆ. ನಾನು ನಿರ್ದೇಶಕರಾದಾಗ ತಾಲೂಕಿ ನಲ್ಲಿ ೬೦,೦೦೦ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದರೆ, ಪ್ರಸ್ತುತ ೧,೪೦,೦೦೦ ಲೀಟರ್ ಹಾಲು ಸಂಗ್ರಹಣೆ ಯಾಗುತ್ತಿದೆ. ಗುಣಮಟ್ಟ ಸಾಧಿಸಬೇಕಾದರೆ ಹಾಲು ಉತ್ಪಾದಕರಿಗೆ ತೊಂದರೆಯಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸ್ವಂತ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟವು ಕೆಎಂಎಫ್ ಆರ್ಥಿಕ ಸಹಕಾರ ನೀಡುತ್ತಿದೆ.


ನನ್ನನ್ನು ಕೋಮುಲ್‌ನಲ್ಲಿ ಹೆಚ್ಚಿನ ಅವಧಿಯ ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ತಾಲೂಕು ಹಾಲು ಉತ್ಪಾದಕರು ಋಣ ತೀರಿಸಲು ಹಾಲು ಉತ್ಪಾದನೆ ಹೆಚ್ಚಳಕ್ಕಾಗಿ ಹಲವು ರೀತಿಯ ಸವಲತ್ತುಗಳನ್ನು ಜಾರಿಗೆ ತಂದಿದ್ದಾರೆ. ವ್ಯಾಪ್ತಿಯನ್ನು ವಿಸ್ತರಿಸಿದರೂ ಅಭಿವೃದ್ಧಿಯ ಅಗತ್ಯವಿದೆ.


ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ವೆಂಕಟೇಶ್, ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ಸಭೆಯ ವಾರ್ಷಿಕ ವರದಿಯನ್ನು ಮಂಡಿಸಿದರು. ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಮೊಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೋಮುಲ್ ನಿರ್ದೇಶಕ ಶ್ರೀನಿವಾಸ್, ದರ್ಕಾಸು ಸಮಿತಿ ಅಧ್ಯಕ್ಷ ಎಸ್‌ಸಿ ನಾರಾಯಣಸ್ವಾಮಿ, ನಿವೃತ್ತ ಶಿಕ್ಷಣಾಧಿಕಾರಿ, ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ. ಲೋಹಿತ್, ಸಂಘದ ನಿರ್ದೇಶಕರಾದ ಸಿ.ಎನ್. ಸೂರ್ಯ ಪ್ರಕಾಶ್, ವೆಂಕಟರಮಣಪ್ಪ, ಎಸ್.ಎಮ್. ಶಾಮಣ್ಣ, ಬಾಲಕೃಷ್ಣಪ್ಪ, ಪ್ರಸನ್ನ ಕುಮಾರ್, ಅಬ್ಬಪ್ಪ, ನಾರಾಯಣಸ್ವಾಮಿ, ಎಸ್.ಎಮ್. ವೆಂಕಟೇಶಪ್ಪ, ಎಸ್.ಎಮ್. ರಾಜಪ್ಪ, ವೆಂಕಟೇಶಪ್ಪ, ತೊಳಿಸಮ, ರಾಧಮ್ಮ, ಮುಖಂಡರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ರಾವ್, ಸಿಬ್ಬಂದಿ ಗಣಪತಿ, ಗಜೇಂದ್ರ, ಸೇರಿ ಹಾಲು ಉತ್ಪಾದಕರೂ ಉಪಸ್ಥಿತರಿದ್ದರು.