
ಬೀದರ: ಮಗುವಿನ ನಾಮಕರಣದಂತಹ ಶುಭ ಸಂದರ್ಭದಲ್ಲಿ ಸಸಿ ನೆಟ್ಟು, ಅದನ್ನು ಕಾಳಜಿಯಿಂದ ಪಾಲನೆ-ಪೆÇೀಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹಾರಕೂಡ ಮಠದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಕರೆ ನೀಡಿದರು.
ನಗರದ ಶಿವನಗರ (ದಕ್ಷಿಣ)ದಲ್ಲಿ ಶ್ರೀಮತಿ ಪುಷ್ಪಾವತಿ-ರಮೇಶ್ ಕಪಲಾಪುರೆ ಅವರ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ನಗರಗಳ ಅಭಿವೃದ್ಧಿ, ಸುಂದರೀಕರಣ ಹಾಗೂ ಕೈಗಾರಿಕೀಕರಣದ ಹೆಸರಿನಲ್ಲಿ ಬೆಳೆದು ನಿಂತಿರುವ ಗಿಡ-ಮರಗಳನ್ನು ನಿರ್ದಯವಾಗಿ ಕಡಿದು ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಮಾನವ ನಿರ್ಮಿತ ಪರಿಸರ ಸಮಸ್ಯೆಗಳಿಂದ ವರ್ಷದಿಂದ ವರ್ಷಕ್ಕೆ ಮಳೆಯ ಕೊರತೆ ಎದುರಾಗಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪರಿಸರವನ್ನು ಹಸಿರಾಗಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ. ಈ ಕಾರ್ಯವನ್ನು ಪ್ರಾಮಾಣಿಕವಾಗಿ ಕೈಗೊಳ್ಳಬೇಕು ಎಂದು ಹೇಳಿದರು.
ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕøತ ವೀರಭದ್ರಪ್ಪ ಉಪ್ಪಿನ್ ಅವರು ಪೂಜ್ಯರಿಗೆ ಸಾಂಕೇತಿಕವಾಗಿ ಸಸಿ ನೀಡಿ ಮಾತನಾಡಿ, ಸಾರ್ವಜನಿಕ, ಸಾಮಾಜಿಕ ಹಾಗೂ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಉಡುಗೊರೆಗಳೊಂದಿಗೆ ಸಸಿಗಳನ್ನು ವಿತರಿಸುವ ಪರಿಪಾಠ ಬೆಳೆಸಿದರೆ ಜನರಲ್ಲಿ ಪರಿಸರ ಸಂರಕ್ಷಣೆಯ ಕುರಿತು ಪರಿಣಾಮಕಾರಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಚನ್ನವೀರ ಶಿವಾಚಾರ್ಯರಿಗೆ ಗೌರವ ತುಲಾಭಾರ ನೆರವೇರಿಸಲಾಯಿತು.
ಪಲ್ಲವಿ-ಸಂತೋಷ, ರವಿಚಂದ್ರ-ಸಾಯಿ ಸುನಂದಾ, ಸಂದೀಪ್-ಕಾವೇರಿ, ರಿತೇಶ್, ಸಾಯಿಚಂದ, ಸೂರ್ಯಕಾಂತ, ಯೋಗ ಸಾಧಕರಾದ ಮಲ್ಲಿಕಾರ್ಜುನ ಪಾಟೀಲ್, ನಿಜಲಿಂಗಪ್ಪ ತಗಾರೆ, ಬಸವರಾಜ, ಸಂಜು ಶೀಲವಂತ, ಜ್ಞಾನೇಶ್, ವೀರಶೆಟ್ಟಿ, ಸಂಜು ಪಾಟೀಲ್, ಗಂಗಾಧರ-ಸರೋಜಿನಿ, ಅರುಣಾ, ವೀಣಾ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.























