
ಕಲಬುರಗಿ: ಅನ್ನ ಸಂತಾರ್ಪಣೆ ಅತ್ಯಂತ ಪವಿತ್ರ ಹಾಗೂ ಪುಣ್ಯದ ಸೇವಾಕಾರ್ಯವಾಗಿದೆ ಇಲ್ಲಿನ ಸಿಟಿ ಬಸ್ ನಿಲ್ದಾಣದ ಫ್ರೋಟ್ಸ್-ಆಲೂ ಬಂಡಿ ವ್ಯಾಪಾರಿಗಳು ಈದ್ ಮಿಲಾದ್ ಹಬ್ಬವನ್ನು ಅನ್ನ ಸಂತಾರ್ಪಣೆಯ ಮೂಲಕ ಪ್ರತಿವರ್ಷ ಆಚರಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು.
ನಗರದ ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಫ್ರೋಟ್ಸ್-ಆಲೂ ಬಂಡಿ ವ್ಯಾಪಾರಿಗಳು ಆಯೋಜಿಸಿದ್ದ ಮಿಲಾದ್ ಉನ್ ನಬಿ ಈದ್ ಮಿಲಾದ್ ಹಬ್ಬ ಮತ್ತು ಅನ್ನ ಸಂತಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ೨೫-೩೦ ವರ್ಷಗಳಿಂದ ನಿರಂತರವಾಗಿ ಪ್ರಸಾದ ಸೇವಾ ಕಾರ್ಯವನ್ನು ಆಯೋಜಿಸುತ್ತಿರುವ ಸಂಘಟಕರಿಗೆ ಅಲ್ಲಾಹನು ಹಿನ್ನು ಹೆಚ್ಚಿನ ಸೇವೆ ಸಲ್ಲಿಸುವ ಸೌಭಾಗ್ಯವನ್ನು ಕಲ್ಪಿಸಲಿ ಎಂದು ಶುಭ ಹಾರೈಸಿದರು.
ಹಿಂದೂ ಮುಸ್ಲೀಮರ ಪವಿತ್ರ ಸಂಗಮವನ್ನು ಇಲ್ಲಿ ಕಾಣಲು ಸಾಧ್ಯವಿದೆ. ಎಲ್ಲರನ್ನು ಆಹ್ವಾನಿಸಿ ಈದ್ ಮಿಲಾದ ಉತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಸಮಿತಿಯ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಸೇವಾ ಕಾರ್ಯ ಮೆಚ್ಚುಂತದ್ದಾಗಿದೆ, ತಮ್ಮ ಬೀದಿವ್ಯಾಪಾರಿಗಳ ಸಂಘದಿAದ ಈ ಸೇವಾ ಕಾರ್ಯದಲ್ಲಿ ಭಾಗವಹಿಸಲು ತುಂಬ ಸಂತೋಷ ಅನಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡ ನಂ.೨೪ರ ಪಾಲಿಕೆ ಸದಸ್ಯ ಜೆಬಿ ಅಲಿ ಮದರ್, ಅಲ್ಲಾವುದ್ದಿನ ವಹಿಸಿದ್ದರು. ಜಾವೀದ್ ಸಾಹೇಬ, ಅಜೀಜ್ ಸಾಹೇಬ್, ಖಯ್ಯೂಂ ಸಾಹೇಬ್, ಅಖಿಲ್ ಸಾಹೇಬ್, ಸಾಜೀದ್, ಸಲೀಮ್, ಪಾಶಾ, ಜಗತ್ ಸಿಂಗ್, ಮಂಜುನಾಥ ನಾಲ್ವರಕರ, ಮಹೇಶ, ಶಿವ ಬಾಗೋಡಿ, ಸಲ್ಮಾನ್, ಅಬ್ದುಲ ಅಜೀಜ್, ಶಹನವಾಜ್, ಉಮೇಶ, ಬಾಬು ಶೇಖ್ ಪರಿಟ್ ಸೇರಿದಂತೆ ಹಲವರಿದ್ದರು.

































