
ಲಕ್ಷೆ÷್ಮÃಶ್ವರ,ಸೆ.23: ಭೀಕರ ಬರಗಾಲದ ಮಧ್ಯೆಯು ರೈತರು ಅಳಿದುಳಿದ ಬೆಳೆಯನ್ನು ರಕ್ಷಿಸಿಕೊಂಡು ಉತ್ಪನ್ನವನ್ನು ಕೈಗೆ ತೆಗೆದುಕೊಳ್ಳುತ್ತಿದ್ದರೆ ಮಾರುಕಟ್ಟೆಯಲ್ಲಿ ವಿಪರೀತ ಬೆಲೆ ಇದ್ದು ಆದರೆ ಇಳುವರಿ ಕುಂಠಿತಗೊAಡು ರೈತರು ಗಾಯದ ಮೇಲೆ ಬರೆ ಅನುಭವಿಸುತ್ತಿದ್ದಾರೆ.
ತಾಲೂಕಿನಲ್ಲಿ ತೋಟಗಾರಿಕಾ ಬೆಳೆಯಾದ ಈರುಳ್ಳಿಯನ್ನು ೧೩೧ ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು ನಿರೀಕ್ಷೆಗೆ ತಕ್ಕಂತೆ ಬೆಳೆ ಬಂದಿದ್ದರೆ ರೈತರು ಬರವನ್ನು ಹೇಗಾದರೂ ನಿಭಾಯಿಸುತ್ತಿದ್ದರು.
ಆದರೆ ಈಗ ಈರುಳ್ಳಿ ಬೆಳೆ ಕೈಗೆ ಬಂದಿದ್ದು ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗನುಗುಣವಾಗಿ ಬೆಲೆ ನಿಗದಿಯಾಗುತ್ತಿದೆ ಒಂದು ಮೂಲದ ಪ್ರಕಾರ ಉತ್ತಮ ಗುಣಮಟ್ಟದ ಈರುಳ್ಳಿ ೩೦೦೦ ಗಳಿಂದ ೪೫೦೦ ಗಳ ವರೆಗೆ ಮಾರಾಟವಾಗುತ್ತಿದೆ ಆದರೆ ಬೆಲೆ ಇದ್ದರೂ ಉತ್ಪನ್ನದ ಕುಂಠಿತದಿAದಾಗಿ ರೈತರು ಕೈ ಕೈ ಹಿಸುಕಿ ಕೊಳ್ಳುತ್ತಿದ್ದಾರೆ.
ಕಳೆದ ವರ್ಷ ವಿಪರೀತ ಮಳೆಯಿಂದಾಗಿ ಜಮೀನುಗಳಲ್ಲಿಯೇ ಈರುಳ್ಳಿ ಕೊಳೆತು ನಾಶವಾಗಿದ್ದರೆ ಈ ಬಾರಿ ಮಳೆಯೇ ಇಲ್ಲವೇ ಸಣ್ಣ ಗಾತ್ರದ ಗಡ್ಡೆಗಳನ್ನು ಕಟ್ಟಿಕೊಂಡು ಈರುಳ್ಳಿ ಉತ್ಪನ್ನ ಬಂದಿದ್ದು ರೈತರಿಗೆ ಒಂದು ಕಡೆ ಖುಷಿಯಾದರೆ ಮತ್ತೊಂದು ಕಡೆ ಸಂಕಷ್ಟ ಎದುರಾಗುತ್ತಿದೆ.
ಈರುಳ್ಳಿ ಬೆಳೆದ ಬೆಳೆಗಾರ ಯುವ ರೈತ ಮಲ್ಲಿಕಾರ್ಜುನ ಕಳಸಾಪುರ್ ಪ್ರತಿಕ್ರಿಯೆ ವ್ಯಕ್ತಪಡಿಸಿ ಕಳೆದ ವರ್ಷ ವಿಪರೀತ ಮಳೆಯಿಂದ ಜಮೀನುಗಳಲ್ಲಿಯೇ ಈರುಳ್ಳಿ ನಾಶವಾಯಿತು ಈ ಬಾರಿ ಉತ್ತಮ ಬೆಲೆ ಇದ್ದರೂ ಬರಗಾಲದಿಂದಾಗಿ ಇಳುವರಿ ಕುಂಠಿತಗೊAಡು ಮಾಡಿದ ಖರ್ಚು ಸಹ ಬರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ನೊಂದು ನುಡಿಯುತ್ತಾರೆ
ಈಗ ಈರುಳ್ಳಿ ಬೆಳೆ ಬಂದಿದ್ದು ಜಮೀನುಗಳಲ್ಲಿ ಈರುಳ್ಳಿಯನ್ನು ಗಾತ್ರಕ್ಕ ಅನುಗುಣವಾಗಿ ಬೇರ್ಪಡಿಸಿ ಮಾರಾಟ ಮಾಡಲು ರೈತರು ಸಿದ್ಧತೆ ನಡೆಸಿದ್ದಾರೆ.























