Home ಮುಖಪುಟ ಸುದ್ದಿ ಡಿಆರ್‌ಡಿಒದಿಂದ ಮೂರು ಕ್ಷಿಪಣಿ ಪರೀಕ್ಷೆ ಯಶಸ್ವಿ

ಡಿಆರ್‌ಡಿಒದಿಂದ ಮೂರು ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ,ಜೂ.೧೩- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಸ್ವದೇಶಿಯ ‘ಐರನ್ ಡೋಮ್’ ಅಭಿವೃದ್ಧಿಪಡಿಸಿದ್ದು ನಿನ್ನೆ ಮತ್ತು ಮೊನ್ನೆ ಸತತ ಮೂರು ಕ್ಷಿಪಣಿಯ ಪರೀಕಾರ್ಥ ಹಾರಾಟ ಯಶಸ್ವಿಯಾಗಿ ನಡೆಸಿದೆ. ಖಡಾಂತರ ಕ್ಷಿಪಣಿ ರಕ್ಷಣಾ ಮತ್ತು ನೌಕಾಪಡೆ ವಿರೋಧಿ ಯುದ್ಧದಲ್ಲಿ ಸುಧಾರಿತ ಸಾಮರ್ಥ್ಯ ಪ್ರದರ್ಶಿಸಿದೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಮಧ್ಯಂತರ ಶ್ರೇಣಿಯ ಖಡಾಂತರ ಕ್ಷಿಪಣಿ ರಕ್ಷಣಾ ಎಂದು ವರ್ಗೀಕರಿಸಲಾದ ಎರಡು ಸುಧಾರಿತ ಪ್ರತಿಬಂಧಕ ಕ್ಷಿಪಣಿಗಳನ್ನು ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಸೇನೆಗೆ ಪ್ರಬಲ ಅಸ್ತ್ರವಾಗುವ ನಿರೀಕ್ಷೆ ಇದೆ.

ಈ ಪ್ರತಿಬಂಧಕ ಕ್ಷಿಪಣಿಗಳನ್ನು ಎಂಡೋ-ವಾತಾವರಣ ಮತ್ತು ಎಕ್ಸೋ-ವಾತಾವರಣ ಪ್ರದೇಶಗಳಲ್ಲಿ ೨,೦೦೦ ಕಿಮೀ ಮತ್ತು ೫,೦೦೦ ಕಿಮೀ ನಡುವಿನ ವ್ಯಾಪ್ತಿಯ ಪ್ರತಿಕೂಲ ಖಡಾಂತರ ಬೆದರಿಕೆ ಪತ್ತೆಹಚ್ಚಲು, ಪತ್ತೆ ಹಚ್ಚಿದ ನಂತರ ಅವುಗಳನ್ನು ತಟಸ್ಥಗೊಳಿಸಲು ವಿನ್ಯಾಸಗೊಳಿಸಲಾಗಿದೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ನೌಕಾ ಹಡಗು ವಿರೋಧಿ ಕ್ಷಿಪಣಿ-ಮಧ್ಯಮ ಶ್ರೇಣಿಯ ಮೊದಲ ಹಾರಾಟ ಪರೀಕ್ಷೆ ಸಹ ನಡೆಸಿತು. ನೌಕಾ ವೇದಿಕೆಯಿಂದ ಉಡಾಯಿಸಲಾದ ಈ ಕ್ಷಿಪಣಿಯು ಪಿನ್‌ಪಾಯಿಂಟ್ ನ್ಯಾವಿಗೇಷನ್, ಕಡಿಮೆ ಮಟ್ಟದ ಸಮುದ್ರ-ಸ್ಕಿಮ್ಮಿಂಗ್ ಹಾರಾಟ ಮತ್ತು ಕಡಲ ಗುರಿಗಳ ವಿರುದ್ಧ ಟರ್ಮಿನಲ್ ನಿಖರತೆ ಪ್ರದರ್ಶಿಸಿದ್ದು ಭಾರತೀಯ ಸೇನೆಗೆ ದೊಡ್ಡ ಶಕ್ತಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ದೀರ್ಘ-ಶ್ರೇಣಿಯ ಬೆದರಿಕೆ ಪ್ರತಿಬಂಧಿಸುವ ಸಾಮರ್ಥ್ಯವಿರುವ ಬಹು-ಪದರದ ಖಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಯಶಸ್ವಿ ಮೌಲ್ಯೀಕರಣ ಈ ಪ್ರಯೋಗಗಳಲ್ಲಿ ಒಂದಾಗಿದೆ, ಇದು ಸಹಜವಾಗಿ ಭಾರತೀಯ ರಕ್ಷಣಾ ಪಡೆಗಳುಗೆ ಮತ್ತೊಂದು ಪ್ರಮುಖ ಅಸ್ತ್ರವಾಗಲಿದೆ

ಒಳಬರುವ ಖಡಾಂತರ ಕ್ಷಿಪಣಿ ಪತ್ತೆಹಚ್ಚಲು ಮತ್ತು ಅವುಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾದ ರಾಡಾರ್‌ಗಳು, ಕಮಾಂಡ್ ಸೆಂಟರ್‌ಗಳು ಮತ್ತು ಇಂಟರ್‍ಸೆಪ್ಟರ್ ಕ್ಷಿಪಣಿಗಳ ಮುಂದುವರಿದ ಜಾಲವಾಗಿದೆ. ಆಧುನಿಕ ರಾಷ್ಟ್ರೀಯ ಭದ್ರತೆಯ ನಿರ್ಣಾಯಕ ಅಂಶಗಳಾಗಿವೆ, ವಾತಾವರಣದೊಳಗೆ ಅಥವಾ ಬಾಹ್ಯಾಕಾಶದಲ್ಲಿ ಬೆದರಿಕೆಗಳನ್ನು ಪ್ರತಿಬಂಧಿಸುವ ಮೂಲಕ ರಕ್ಷಣೆ ಒದಗಿಸುತ್ತವೆ ಎಂದು ಹೇಳಲಾಗಿದೆ.

ಅಮೆರಿಕ, ರಷ್ಯಾ, ಇಸ್ರೇಲ್ ಮತ್ತು ನ್ಯಾಟೋದಂತಹ ಗುಂಪುಗಳಂತಹ ಕೆಲವೇ ರಾಷ್ಟ್ರಗಳು ವಿವಿಧ ವಾಯುಗಾಮಿ ಬೆದರಿಕೆ ಎದುರಿಸಲು ಈ Sಡಾಂತರ ಕ್ಷಿಪಣಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಮಾಹಿತಿ ನೀಡಲಾಗಿದೆ.