Home ಜಿಲ್ಲೆ ಡಾ. ಸುರೇಶ ಕಾಗಲ್ಕರ್ ಅವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

ಡಾ. ಸುರೇಶ ಕಾಗಲ್ಕರ್ ಅವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

ವಿಜಯಪುರ, ಜೂ. 14:ಇತ್ತೀಚೆಗೆ ಬೆಂಗಳೂರಿನ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ
ರಾಜ್ಯಮಟ್ಟದ ಕರ್ನಾಟಕ ಮೀಡಿಯಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ
ವಿಜಯಪುರದ ಪ್ರಸಿದ್ಧ ಮೂತ್ರಪಿಂಡ ತಜ್ಞ ಡಾ. ಸುರೇಶ ಕಾಗಲ್ಕರ್ ಅವರಿಗೆ
ರಾಜ್ಯಮಟ್ಟದ “ಪ್ರೈಡ್ ಆಫ್ ಕರ್ನಾಟಕ “ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಿನಿಮಾ ನಟ ಚೇತನ
ಅಹಿಂಸ ಹಾಗೂ ಪ್ರಸಿದ್ಧ ವೈದ್ಯ ಪದ್ಮ ಪ್ರಕಾಶ ಹಾಗೂ ತಂಡದ
ಅಧ್ಯಕ್ಷ ರಮೇಶ ಎಸ್.ಜಿ ಪ್ರಶಸ್ತಿ ನೀಡಿ ಸನ್ಮಾನ ಮಾಡಿದರು.
ವೇದಿಕೆ ಮೇಲೆ ಲೋಕಸಭಾ ಸದಸ್ಯರಾದ ಪಿ.ಸಿ ಮೋಹನ್ ಹಾಗೂ ವಿಧಾನಸಭೆಯ
ಪ್ರತಿಪಕ್ಷದ ನಾಯಕ ಆರ್. ಅಶೋಕ, ಚಲನಚಿತ್ರ ನಟ ಚೇತನ
ಅಹಿಂಸ ಇನ್ನಿತರರು ಭಾಗವಹಿಸಿದ್ದರು. ರಾಜ್ಯದ ವಿವಿಧ ಕಡೆಗಳಿಂದ 2 ನೂರಕ್ಕೂ
ಹೆಚ್ಚು ವಿವಿಧ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಪ್ರಸ್ತುತ ಡಾ. ಸುರೇಶ
ಅವರು ಅಲಮೀನ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಯುರಾಲಜಿ ವಿಭಾಗದ ಲ್ಲಿ ಕಾರ್ಯ
ನಿರ್ವಹಿಸುತ್ತಿದ್ದಾರೆ. ಬಹುಮುಖ ಪ್ರತಿಭೆ ಯುಳ್ಳ ಅವರು ಸಾಹಿತ್ಯ ಸಂಸ್ಕøತಿ,
ಭಾರತಿಯ ವೈದ್ಯಕೀಯ ಸಂಘದ ರಾಜ್ಯದ ಚೇರ್ಮನ್ ರಾಗಿ ಕೆಲಸ ಮಾಡುತ್ತಿದ್ದಾರೆ.
ವೈದ್ಯರುಗಳ ತಂಡ , ಗೆಳೆಯರ ತಂಡ ಹಾಗೂ ಅಲ ಅಮೀನ್ ವೈದ್ಯಕೀಯ
ಕಾಲೇಜಿನ ಸಿಬ್ಬಂದಿ ತಂಡ ಅಭಿನಂದಿಸಿದ್ದಾರೆ.