Home ಜಿಲ್ಲೆ ಕಲಬುರಗಿ ಅನಿತಾ ಬಡಿಗೇರಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಅನಿತಾ ಬಡಿಗೇರಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಕಲಬುರ್ಗಿ. ಸೆ. 13- ಜೇವರಗಿ ತಾಲೂಕಿನ ಮಂದಾರವಾಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅನಿತಾ ರಮೇಶ ಬಡಿಗೇರ ಅವರು ಶಾಲಾ ಶಿಕ್ಷಣ ಇಲಾಖೆಯು ಕೊಡಮಾಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ತಿಳಿಸಿದ್ದಾರೆ. ಸೆ.15ರಂದು ಬೆಳಗ್ಗೆ 10 – 30 ನಿಮಿಷಕ್ಕೆ ನಗರದ ಡಾ. ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಜರಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಅವರು ತಿಳಿಸಿದ್ದಾರೆ
ಹರ್ಷ: ಕ್ರಿಯಾಶೀಲ ಶಿಕ್ಷಕಿ ಅನಿತಾ ರಮೇಶ ಬಡಿಗೇರವರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಪ್ರಶಸ್ತಿ ಲಭಿಸಿದ್ದಕ್ಕೆ ಮಾಜಿ ಮಹಾಪೌರ ಸೋಮಶೇಖರ ಮೇಲಿನಮನಿ, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ, ಮಹಿಳಾ ಉದ್ಯಮಿ ಶೀಲಾ ಕಲ್ಬುರ್ಗಿ ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ದೇವೇಂದ್ರಪ್ಪ ಬಡಿಗೇರ, ಪವನಕುಮಾರ ವಳಕೇರಿ, ಅಶ್ವಿನಿ ಚೌಹಾಣ್, ರಮ್ಯಾ ಕುಲಕಣಿ9, ಕಲ್ಯಾಣಕುಮಾರ ಶೀಲವಂತ ಹೋಟೆಲ್ ಉದ್ಯಮಿ ಸತ್ಯನಾಥ ಶೆಟ್ಟಿ ಹಾಗೂ ಮಂದಾರವಾಡ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.