Home ಜಿಲ್ಲೆ ಸಿಹಿ ವಿತರಣೆ

ಸಿಹಿ ವಿತರಣೆ

ರಬಕವಿ.ಬನಹಟ್ಟಿ,ಆ೨೭: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಬನಹಟ್ಟಿ ನಗರದಲ್ಲಿ ಮುಸ್ಲಿಂ ಬಾಂಧವರ ವತಿಯಿಂದ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು.


ಪ್ರವಾದಿ ಮಹಮ್ಮದ್ ಪೈಗಂಬರ ಅವರ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದ ಬಾಂಧವರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಸಿಹಿ ಹಂಚಿ ಸಂಭ್ರಮಿಸಿದರು.


ಡಾ. ಅಕ್ಬರ ತಾಂಬೋಳಿ ಮಾತನಾಡಿದರು. ರಾಹಿಲ ಮೌಲಾನ, ಫಿರೋಜ್ ಜಕಾತಿ, ಜಾಫರ್ ಪನಿಬಂಧ, ಸಾಧಿಕ್ ಜಕಾತಿ, ಸಲೀಂ ಜಕಾತಿ, ಮೆಹಬೂಬ್ ತಾಂಬೋಳಿ, ಸಿರಾಜ್ ಮಳಲಿ, ಸರ್ದಾರ್ ಡಾಂಗೆ, ತೌಶಿಪ ಚಪಾತಿ, ಚೆಸ್ತಿ÷್ಮಯ ಮೋಮಿನ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.