Home ಜಿಲ್ಲೆ ತುಮಕೂರು ಮಕ್ಕಳಿಗೆ ಕಳಪೆ ಶೂ, ಆಹಾರ ವಿತರಣೆಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ: ಸಂಸದ ಕಾರಜೋಳ ಆರೋಪ

ಮಕ್ಕಳಿಗೆ ಕಳಪೆ ಶೂ, ಆಹಾರ ವಿತರಣೆಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ: ಸಂಸದ ಕಾರಜೋಳ ಆರೋಪ

ಪಾವಗಡ, ಸೆ. ೨೬- ಮಕ್ಕಳ ಶೂನಲ್ಲಿ, ಕಳಪೆ ಆಹಾರ ನೀಡುತ್ತಾ, ಭ್ರಷ್ಟಾಚಾರ ಎಸಗೆ ಕೀಳು ಮಟ್ಟದ ಆಡಳಿತ ನಡೆಸುತ್ತಿದೆ ಎಂದು ರಾಜ್ಯ ಸರ್ಕಾರಕ್ಕೆ ವಿರುದ್ಧ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಚಾಟಿ ಏಟು ಬೀಸಿದರು .


ಪಟ್ಟಣದ ಶ್ರೀ ಯೋಗಿ ನಾರಾಯಣ ಸ್ವಾಮಿ ದೇವಸ್ಥಾನದ ಅವಣದಲ್ಲಿ ಸಮುದಾಯ ಭವನ ಲೋಕಾರ್ಪಣೆ ಮತ್ತು ಪಾವಗಡ ಪಟ್ಟಣದ ರೊಪ್ಪ ಬಳಿ ನಿರ್ಮಾಣವಾಗಿರುವ ನೂತನ ರೈಲ್ವೆ ನಿಲ್ದಾಣ ಮತ್ತು ಕಡಮಲ ಕುಂಟೆಯಲ್ಲಿ ವಿವಿಧ ಕಾಮಗಾರಿ ಹಾಗೂ ರಾಜವಂತಿ ಬಳಿ ಸಮುದಾಯ ಭವನ ಲೋಕಾರ್ಪಣೆ, ರಾಜಮಂತಿಯ ಗಡಿ ಆಂಧ್ರಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಬಿಜಿ ರಾಮ್‌ಜಿ ಯೋಜನೆಯಲ್ಲಿ ಇಲ್ಲಿವರೆಗೆ ರಾಜ್ಯ ಸರ್ಕಾರ ಹಣದ ಬಳಕೆ ಪ್ರಮಾಣ ಪತ್ರ ನೀಡಿಲ್ಲ ಇದರಿಂದ ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ ಎಂದರು.


ಹಣದ ಬಳಕೆ ಪ್ರಮಾಣ ಪತ್ರ ನೀಡಿದರೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುತ್ತದೆ. ಪಾವಗಡ ತಾಲ್ಲೂಕಿನ ಸೋಲಾರ್ ಸಿಯಾಸರ್ ಫಂಡಲ್ಲಿ ಪಾವಗಡ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಲು ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ. ಸೋಲಾರ್ ಪಾರ್ಕ್‌ನ ತೆರಿಗೆಯನ್ನು ಗ್ರಾಮ ಪಂಚಾಯ್ತಿಗಳು ವಸೂಲಿ ಮಾಡಲು ಸಂಪೂರ್ಣ ಅಧಿಕಾರವಿದೆ. ಭದ್ರಾ ಮೇಲ್ದಂಡೆ ಯೋಜನೆಯ ೨೨ ಸಾವಿರ ಕೋಟಿ ರೂ.ಗಳಲ್ಲಿ ೧೨ ಸಾವಿರ ಕೋಟಿ ರೂ. ಮಾತ್ರ ಬಳಕೆಯಾಗಿದೆ. ಉಳಿದ ೧೦. ಸಾವಿರ ಕೋಟಿ ರೂ.ಗಳ ಕಾಮಗಾರಿಗಳು ನಡೆಯಬೇಕಾಗಿದೆ, ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿದ್ದು ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.


ನಂತರ ದೊಡ್ಡಹಳ್ಳಿ ವಾಜಪೇಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ವಿರುದ್ಧ ಕೆಂಡಮಂಡಲರಾಗಿ ಶಾಲೆಯ ಪ್ರಾಂಶುಪಾಲರನ್ನುಈ ಕೂಡಲೇ ಅಮಾನತು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ. ಎಂ. ತಿಮ್ಮರಾಯಪ್ಪ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎನ್. ತಿಮ್ಮಾರೆಡ್ಡಿ, ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಆರ್. ಸಿ.ಅಂಜನಪ್ಪ, ಬಿಜೆಪಿ ಮುಖಂಡರಾದ ಡಾ. ಜಿ ವೆಂಕಟರಾಮಯ್ಯ, ತಾಲ್ಲೂಕು ಬಿಜೆಪಿ ಅಧ್ಯಕ್ಷ ದೊಡ್ಡ ಹಳ್ಳಿ ಅಶೋಕ್, ಬಿಜೆಪಿ ರವಿ, ಪ್ರಭಾಕರ ಮ್ಯಾಸ ನಾಯಕ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್..ಎ.ಈರಣ್ಣ, ಮಾಜಿ ಅಧ್ಯಕ್ಷ ಬಲರಾಮ ರೆಡ್ಡಿ ಉಪಸ್ಥಿತರಿದ್ದರು.