Home ಜಿಲ್ಲೆ ಕಲಬುರಗಿ ಸ್ವಾಸ್ತಿಕ ನಗರದ ಮಹಾಲಕ್ಷ್ಮಿಗುಡಿಯಲ್ಲಿಅಧಿಕ ಮಾಸದ ನಿಮಿತ್ಯ 33 ವಚನ ಪುಸ್ತಕ ವಿತರಣೆ

ಸ್ವಾಸ್ತಿಕ ನಗರದ ಮಹಾಲಕ್ಷ್ಮಿಗುಡಿಯಲ್ಲಿಅಧಿಕ ಮಾಸದ ನಿಮಿತ್ಯ 33 ವಚನ ಪುಸ್ತಕ ವಿತರಣೆ

ಕಲಬುರಗಿ:ಜೂ.14:ಅಧಿಕ ಮಾಸದ ಈ ದಿನದಂದು ಶುಕ್ರವಾರ ಸ್ವಾಸ್ತಿಕ ನಗರದ ಶ್ರೀ ಮಹಾಲಕ್ಷ್ಮೀಗುಡಿಯಲ್ಲಿ ಭಕ್ತರಿಗೆ ಶರಣ ಶರಣೆಯರ 108 ವಚನಗಳನ್ನು ಮುದ್ರಣ ಮಾಡಿದ ಶರಣಗೌಡಕಿರಣಗಿ ವಚನಾಮೃತ ಪುಸ್ತಕ ವಿತರಿಸಿ 33 ಗುಡಿಗೆ ಪ್ರದರ್ಶನ ಹಾಕಿ 33 ಭಜನೆ ಹಾಡುಗಳನ್ನು ಹಾಡುವ ಮೂಲಕ ವಿಶೇಷ ರೀತಿಯಲ್ಲಿಅಧಿಕ ಶುಕ್ರವಾರಆಚರಿಸಲಾಯಿತುಎಂದುಧಾರ್ಮಿಕ ಸೇವಾ ಸಂಸ್ಥೆಯಅಂಡಗಿ ಪ್ರತಿಷ್ಠಾನದ ಕಾರ್ಯದರ್ಶಿ ರೇಖಾಅಂಡಗಿ ಮಾತನಾಡಿದರು. ಸ್ವಾಸ್ತಿಕ ನಗರದಮಹಾಲಕ್ಷ್ಮೀ ಭಜನಾ ಮಂಡಳಿ ಅಧ್ಯಕ್ಷರಾದ ಕಮಲಾ ಬಿ. ಪಾಟೀಲ ಹೇರೂರಉಪಾಧ್ಯಕ್ಷರಾದರಾಜೇಶ್ವರಿಡೆಂಗಿ ಹಾಗೂ ಪದಾಧಿಕಾರಿಗಳಾದ ಇಂದುಮತಿಗುಗ್ಗವಾಡ, ಗುರುಸಿದ್ಧಮ್ಮ ಪಾಟೀಲ, ಶಾಂತಾಬಾಯಿ ಹಾಲಮಟ, ನೀಲಾಂಬಿಕ ಮಂಗಶೆಟ್ಟಿ, ಜಗದೇವಿ ಅವಂಟಿ, ಸೀಮಾ ರೆಡ್ಡಿ, ಜರಿತಾದುಧನಿ, ಶಕುಂತಲಾ ಸುರಗುಂಡೆ, ಮಹೇಶ್ವರಿಕೋಕಟ್, ಕಮಲಾಬಾಯಿ ಜವಳಿ, ರೇಣುಕಾ ಪಾಟೀಲ, ಗಾಯಿತ್ರಿಚಿಟ್ಟಾ, ರೇಣುಕಾ ಪಾಟೀಲ, ವಿಜಯಲಕ್ಷ್ಮೀಕೊತಂಬರಿ, ಪ್ರಮೀಣಾ ಹಲಚೇರಿ, ಪದ್ಮಾಯಾದವ, ಮಹಾದೇವಿ ದುಖಾನದಾರ, ಶಾಂತಾಬಾಯಿಎಲ್ಹೇರಿ, ಜಯಶ್ರೀ ಕೋಗನೂರ, ಸುನಂದಾ ಸ್ವಾಮಿ, ಜಗದೇವಿ ಚಿಟ್ಟಾ, ಶೈಲಜಾಗುರುಮಿಠಕಲ್, ಗಂಗಮ್ಮರಾಯಕೋಡಿ, ಶೋಭಾ ಬಿರಾದಾರ, ಉಪಸ್ಥಿತರಿದ್ದರು.
ದೇವಿಗುಡಿ ಸ್ಥಾಪನೆಯಾದ ವರ್ಷದಿಂದ ಸುಮಾರು 15 ವರ್ಷಗಳಿಂದ ಪೂಜೆ ಸಲ್ಲಿಸುತ್ತಿರುವಶ್ರೀಮತಿ ಮೀನಾಕ್ಷಿ ಪಂಡಿತ್ ಸುಮಾರು 10 ವರ್ಷಗಳಿಂದ ಮಗ ಬಾಹುಬಲಿ ಪಂಡಿತ್ ಈಗ ಎಂಟು ವರ್ಷಗಳಿಂದ ಸೊಸಿ ಸ್ಮೀತಾ ಪಂಡಿತ್‍ಹೀಗೆ 33 ವರ್ಷಗಳಿಂದ ಗುಡಿ ಪೂಜಾರಿ ಸೇವೆ ಸಲ್ಲಿಸುತ್ತಿರುವಕುಟುಂಬಕ್ಕೆ ವಿಶೇಷ ಅಭಿನಂದನೆಯನ್ನು ಶಿವರಾಜ ಅಂಡಗಿ ತಿಳಿಸಿದ್ದಾರೆ.