Home ಜಿಲ್ಲೆ ಕಲಬುರಗಿ ಅಮಿತ್ ಪಾಟೀಲ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಶಸ್ತಿ

ಅಮಿತ್ ಪಾಟೀಲ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಶಸ್ತಿ

ಕಲಬುರಗಿ,ಅ.10: ನಗರದ ಅಮಿತ್ ಪಾಟೀಲ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನ
ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಶಸ್ತಿ ಲಭಿಸಿದೆ.
ವಿದ್ಯಾರ್ಥಿಗಳಾದ ಶ್ರೇಯಸ್ ಎಂ, ಪ್ರತೀಕ ಎಸ್, ಸಮರ್ಥ ಎಂ, ವಾಸು ಪಾಟೀಲ ಎನ್,ನವೀನ ಎ,ಪ್ರಜ್ವಲ್ ಎಸ್,ಅಮೃತೇಶ ಪಿ ಮತ್ತು ವಿದ್ಯಾರ್ಥಿನಿಯರಾದ ಅಕ್ಷತಾ ಸಿ,ಭವಾನಿ ಎಸ್, ಪ್ರತಿಭಾ ಎಸ್,ಸುಮಾ ಆರ್,ನೀಹಾರಿಕಾ ಎಚ್ ಅವರು ರಾಜ್ಯ ಪುರಸ್ಕಾರ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮತ್ತು ವಿಧಾನ ಪರಿಷತ್ತು ಸದಸ್ಯ ಡಾ. ಬಿ.ಜಿ ಪಾಟೀಲ,ವ್ಯವಸ್ಥಾಪಕ ನಿರ್ದೇಶಕ ಮತ್ತು ಬಿಜೆಪಿ ಸಿಟಿ ಪ್ರೆಸಿಡೆಂಟ್ ಚಂದ್ರಕಾಂತ ಬಿ ಪಾಟೀಲ, ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಕೆ ಇ ಸೊಸೈಟಿ ಕೌನ್ಸಿಲ್ ಮೆಂಬರ್ ಡಾ.ಕೈಲಾಸ ಬಿ ಪಾಟೀಲ ,ಜಿಲ್ಲಾ ಕಾರ್ಯದರ್ಶಿ ಪೀರಪ್ಪ ಹೂಗೊಂಡ,ಸ್ಥಳೀ
ಯ ಕಾರ್ಯದರ್ಶಿ ಜಯಪ್ರಕಾಶ ಕಟ್ಟಿಮನಿ,ಶರೀಫ್, ಶಾಲೆಯ ಪ್ರಾಚಾರ್ಯರು ,ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.