Home ಜಿಲ್ಲೆ ಕುಸಿದ ಮಕ್ಕಳ ಸಂಖ್ಯೆ: ಮುಚ್ಚಿದ ಶಾಲೆ

ಕುಸಿದ ಮಕ್ಕಳ ಸಂಖ್ಯೆ: ಮುಚ್ಚಿದ ಶಾಲೆ

ಲಕ್ಷೆ÷್ಮÃಶ್ವರ,ಆ೨೬: ಪಟ್ಟಣದ ಕೆಂಚಲಾಪುರ ಓಣಿಯಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಲ್ಲಿ ಮಕ್ಕಳ ಸಂಖ್ಯೆ ಸೊನ್ನೆಗೆ ತಲುಪಿದ್ದರಿಂದ ಶಾಲೆ ಮುಚ್ಚಿದ ಘಟನೆ ಜರುಗಿದೆ.


ಪ್ರಸಕ್ತ ೨೦೨೬ ೨೭ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೇವಲ ೧೨ ಜನ ವಿದ್ಯಾರ್ಥಿಗಳು ಇದ್ದರು ಎನ್ನಲಾಗಿದೆ ಪಾಲಕರು ಮಕ್ಕಳ ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಶಾಲಾ ವರ್ಗಾವಣೆ ಪತ್ರವನ್ನು ಪಡೆದುಕೊಂಡು ಬೇರೆ ಬೇರೆ ಶಾಲೆಗಳಿಗೆ ಹೆಸರು ನೋಂದಾಯಿಸಿದ್ದಾರೆ.


ಇದ್ದ ವಿದ್ಯಾರ್ಥಿಗಳೆಲ್ಲ ಶಾಲಾ ವರ್ಗಾವಣೆ ಪತ್ರವನ್ನು ಪಡೆದ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಯನ್ನು ಮುಚ್ಚಿದ್ದಾರೆ ಈ ವಿಷಯ ಶಿಕ್ಷಣ ಪ್ರೇಮಿಗಳಿಗೆ ತಲುಪಿ ಶಾಲೆಗೆ ಬಂದು ಪ್ರಶ್ನಿಸಿದಾಗ ಇದ್ದ ವಿಷಯವನ್ನು ಶಿಕ್ಷಕರು ಪಾಲಕರಿಗೆ ಪೋಷಕರಿಗೆ ತಿಳಿಸಿದ್ದಾರೆ.


ಈ ಸುದ್ದಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಲುಪಿದ್ದರಿಂದ ನಿನ್ನೆ ಶಿಕ್ಷಣ ಸಂಯೋಜಕ ರಾಘವೇಂದ್ರ ಜೋಶಿ ಸಿ ಆರ್ ಪಿ ಉಮೇಶ್ ನೇಕಾರ್ ಮುಖ್ಯೋಪಾಧ್ಯಾಯರು ಕೂಡಲೇ ಕಾರ್ಯಪ್ರವೃತ್ತರಾಗಿ ಶಾಲೆ ಬಿಟ್ಟು ಹೋದ ಮಕ್ಕಳನ್ನು ವಾಪಸ್ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಸರ್ಕಾರದ ಶಿಕ್ಷಣ ನೀತಿಯ ಧೋರಣೆಯಿಂದಾಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಪೆಟ್ಟು ಬೀಳುತ್ತಿದ್ದು ಒಂದು ಕಡೆ ಎಲ್ಕೆಜಿ ಯುಕೆಜಿ ಮತ್ತೊಂದು ಕಡೆ ಕರ್ನಾಟಕ ಪಬ್ಲಿಕ್ ಶಾಲೆಯ ಹೆಸರಿನಲ್ಲಿ ಇಂಗ್ಲಿಷ್ ನುಸುಳಿಸಲು ಅಪರೋಕ್ಷವಾಗಿ ಸರ್ಕಾರವೇ ಪ್ರಯತ್ನಿಸುತ್ತಿದೆ ಎಂಬ ಶಿಕ್ಷಣ ಪ್ರೇಮಿಗಳ ಅಸಮಾಧಾನಕ್ಕೆ ಕೆಂಚಲಾಪುರ ಶಾಲೆಯ ಸ್ಥಿತಿಯೇ ಉದಾಹರಣೆ ಎಂದು ಶಿಕ್ಷಣ ಪ್ರೇಮಿಗಳು ಹೇಳುತ್ತಿದ್ದಾರೆ.


ತಾಲೂಕಿನಲ್ಲಿ ಅನೇಕ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು ಕನ್ನಡ ಶಾಲೆಗಳ ಉಳಿವಿಗಾಗಿ ಆಂದೋಲನ ಮಾಡದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಶಾಲೆಗಳು ಇಲ್ಲದಂತಾದರೆ ಅಚ್ಚರಿ ಪಡಬೇಕಿಲ್ಲ.