
ಅಫಜಲಪುರ ; ಪೆÇಲೀಸರ ಹೆಸರು ಹೇಳಿಕೊಂಡು ಬಂದು ಮನೆಯಲ್ಲಿ ಮಲಗಿದ್ದ ಯುವಕನನ್ನು ಕರೆದುಕೊಂಡು ಹೋಗಿ ಕೈ,ಕಾಲು,ರುಂಡ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ನಡೆದಿದೆ.
ತಾಲೂಕಿನ ಗೊಬ್ಬುರ(ಬಿ) ಗ್ರಾಮದ ಖಲೀಮಸಾಬ್ ಹಸರಗುಂಡಗಿ(22) ಎಂಬಾತನನ್ನು ಸೆಪ್ಟಂಬರ್ 21ರಂದು ರಾತ್ರಿ 3 ಗಂಟೆಗೆ ಅದೇ ಗ್ರಾಮದ ಓರ್ವ ವ್ಯಕ್ತಿ ಮನೆಗೆ ಬಂದು ಹೊರಗಡೆ ಮಲಗಿದ್ದ ಮಹಿಳೆಗೆ ಎಬ್ಬಿಸಿ ನಾವು ಪೆÇಲೀಸ್ ಠಾಣೆಯಿಂದ ಬಂದಿದ್ದೇವೆ. ಹೀಗಾಗಿ ನಿನ್ನ ಮಗನಿಗೆ ವಿಚಾರಣೆ ಮಾಡಬೇಕಾಗಿದ್ದು, ಹೀಗಾಗಿ ನಮ್ಮ ಜತೆ ಕಳುಹಿಸು ಎಂದು ಹೇಳಿ ಮನೆಯಲ್ಲೇ ಮಲಗಿದ್ದ ಖಲೀಮಸಾಬ್ ನನ್ನು ಕರೆದುಕೊಂಡು ಹೋಗಿದ್ದಾರೆ.
ಎರಡ್ಮೂರು ದಿನಗಳವರೆಗೆ ಮನೆಗೆ ಮಗ ಬರೆದಿದ್ದಾಗ ಅಕ್ಕ ಪಕ್ಕದ ಮನೆಯವರಿಗೆ ಹಾಗೂ ಸಂಬಂಧಿಕರಿಗೆ ವಿಚಾರಿಸಿದರೂ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ.ಆದರೆ ಶುಕ್ರವಾರ ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಸಾರ್ವಜನಿಕರಿಗೆ ಶವ ನೋಡಿ ಪೆÇೀಲಿಸರಿಗೆ ಮಾಹಿತಿ ಒದಗಿಸಿದ್ದಾರೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ತಮ್ಮರಾಯ ಪಾಟೀಲ್, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್‍ಐ ಸಂಗೀತಾ ಶೀಂಧೆ ಸೇರಿದಂತೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೇವಲ ಗಾಣಗಾಪುರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























