
ರಬಕವಿ-ಬನಹಟ್ಟಿ,ಆ.೨೮:ರಾಮಪುರದ ಶ್ರೀವಿಠಲ-ರುಕ್ಮಿಣಿ ಮಂದಿರದಲ್ಲಿ ಸ್ವಕುಳ ಸಾಳಿ ಸಮಾಜದಿಂದ ಆಯೋಜಿಸಿದ್ದ ಶ್ರೀಜೀವ್ಹೇಶ್ವರ ಜನ್ಮೋತ್ಸವ ಜರುಗಿತು. ಈ ಸಂದರ್ಭದಲ್ಲಿ ಶ್ರೀಜೀವ್ಹೇಶ್ವರ ಮಹಿಳಾ ಮಂಡಳ ಹಾಗೂ ಸ್ವಕುಳ ಸಾಳಿ ಸಮಾಜದ ಮುಖಂಡರು ಭಕ್ತಿಭಾವದಿಂದ ನಡೆಸಿದ ಭಜನೆ ಮತ್ತು ತೊಟ್ಟಿಲ ಕಾರ್ಯಕ್ರಮಗಳು ಸಂಪನ್ನಗೊAಡವು.
ರಾಜೇAದ್ರ ಮಾಂಡವಕರ, ನಂದಕುಮಾರ ದಳವಿ, ಪರಶುರಾಮ ಪಾಟೀಲ, ಮಾರುತಿ ಗಂಥಡೆ, ದೀಪಕ ಗಂಥಡೆ, ಪರಶುರಾಮ ಪಾಗಡೆ, ಬಾಲಚಂದ್ರ ಕಾರ್ವೇಕರ ಸೇರಿದಂತೆ ಮಹಿಳೆಯರು, ಮಕ್ಕಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.






























