
ಆನೇಕಲ್.ಜು.೨೯ : ಚಂದಾಪುರ ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಪ್ರಾರಂಭವಾಗಿರುವ ಖಾಸಗಿ ಬಸ್ ಪಾಕಿಂಗ್‌ಗಳ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಚಂದಾಪುರ ಪುರಸಭೆ ಕಾಂಗ್ರೆಸ್ ಪುರಸಭೆ ಸದಸ್ಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚಂದಾಪುರ ಪುರಸಭೆಯ ನಾಮಿನಿ ಸದಸ್ಯರಾದ ತಿಮ್ಮಾರೆಡ್ಡಿ ಮತ್ತು ಹಳೆ ಚಂದಾಪುರ ಶ್ರೀಧರ್ ಮಾತನಾಡಿ, ಚಂದಾಪುರ ಪುರಸಭೆ ಹಾಗೂ ಇಲಾಖೆಗಳಿಂದ ಯಾವುದೇ ಅನುಮತಿ ಪಡೆಯದೆ ಜೊತೆಗೆ ಯಾವುದೇ ತೆರಿಗೆಯನ್ನು ಪಾವತಿಸದೆ ಅಕ್ರಮವಾಗಿ ಕೆಲವರು ಖಾಸಗಿ ಬಸ್ ಪಾಕಿಂಗ್ ಗಳನ್ನು ನಿರ್ಮಾಣ ಮಾಡಿ ಪ್ರತಿಯೊಂದು ಬಸ್‌ಗಳಿಗೆ ಇಂತಿಷ್ಠು ಹಣವನ್ನು ಪಡೆಯುತ್ತಿದ್ದಾರೆ ಎಂದರು.
ಕಟ್ಟಡ ನಿರ್ಮಾಣ ಮತ್ತು ಯಾವುದೇ ಕಂಪನಿಯನ್ನು ಪ್ರಾರಂಭಿಸಬೇಕಾದರೆ ಸರ್ಕಾರದ ನಿಯಮಾವಳಿಗಳ ಸೂಚನೆ ಆಯಾ ಇಲಾಖೆ ಅಥವಾ ಪುರಸಭೆ ಅನುಮತಿ ಪಡೆಯಬೇಕು ಎಂಬುವ ಕಾನೂನು ಇದೆ.ಆದರೆ ಕೆಲವು ಕಾಣದ ಕೈಗಳು ಅಧಿಕಾರಿಗಳಿಗೆ ಆಸೆ ಆಮಿಷಗಳನ್ನು ತೋರಿಸಿ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ.ಈ ಕಾರಣದಿಂದಲೇ ೨ ದಿನಗಳ ಹಿಂದೆ ಖಾಸಗಿ ಬಸ್ಸು ಪಾಕಿಂಗ್‌ನಲ್ಲಿ ನಿಲ್ಲಿಸಿದ್ದ ೪ ಬಸ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಅದೃಷ್ಠ ವಶ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದರು.
ಈಗಾಗಲೇ ಚಂದಾಪುರ ವೃತ್ತದಲ್ಲಿ ಟ್ರಾಪಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಒಂದು ಕಡೆಯಾದರೆ ಚಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ.ಇತ್ತ ಜನರ ಸಮಸ್ಯೆಗಳಿಗೆಸ್ವಂದಿಸಿದ ಬೇಕಾದ ಪುರಸಭೆ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ಜಾಣ ಪಕ್ಷಿಯಂತೆ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕಣ್ಮುಚ್ಚಿ ಕುಳಿತ್ತಿದ್ದು,ಕೂಡಲೇ ಮಾನ್ಯ ಜಿಲ್ಲಾದಿಕಾರಿಗಳು ಇತ್ತ ಗಮನಹರಿಸಿ ಜನರ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬೈರೇಶ್. ಲಷ್ಮೀಸಾಗರ ರವಿ. ಕಾಂಗ್ರೆಸ್ ಮುಖಂಡರಾದ ಸುದರ್ಶನ್. ಗಣೇಶ್ ಹಾಜರಿದ್ದರು.


































