
ಕುಣಿಗಲ್, ಅ. ೨- ಬೈಕ್‌ನಿಂದ ಬಿದ್ದು ನಿಧನ ಹೊಂದಿದ ಬಿಜೆಪಿ ಮುಖಂಡ ಕೆ.ಎನ್. ಚಂದ್ರಶೇಖರ್ ಮನೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ತಾಲ್ಲೂಕಿನ ಬಿಜೆಪಿ ಯುವ ಮುಖಂಡ ಕೆ.ಎನ್. ಚಂದ್ರಶೇಖರ್ ರವರು ಇತ್ತೀಚಿಗೆ ನಿಧನ ಹೊಂದಿದ ಸುದ್ದಿ ತಿಳಿದು ಅವರ ಮನೆಗೆ ಬೆಂಗಳೂರು ಲೋಕಸಭಾ ಸದಸ್ಯ ಸಿ.ಎನ್. ಮಂಜುನಾಥ್ ಭೇಟಿ ನೀಡಿ ಅವರ ತಂದೆ ನರಸಿಂಹಮೂರ್ತಿ ಹಾಗೂ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಇವರ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು. ನಂತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಬಿ. ಎನ್. ಜಗದೀಶ್ ನಾಗರಾಜಯ್ಯ, ಬಿಜೆಪಿ ಮುಖಂಡರಾದ ಕೆ.ಎಸ್. ಬಲರಾಮ್, ಕೆ.ಎಲ್. ಹರೀಶ್, ದೇವರಾಜ್, ಸುರೇಶ್, ಜೆಡಿಎಸ್ ವಕ್ತಾರ ತರೀಕೆರೆ ಪ್ರಕಾಶ್, ಕೆ.ಎನ್. ಜಗದೀಶ್ ಉಪಸ್ಥಿತರಿದ್ದರು.

























