Home ಮುಖಪುಟ ಸುದ್ದಿ ವಾಣಿಜ್ಯ ಸಿಲಿಂಡರ್ ಏರಿಕೆ ಖರ್ಗೆ ಕಿಡಿ

ವಾಣಿಜ್ಯ ಸಿಲಿಂಡರ್ ಏರಿಕೆ ಖರ್ಗೆ ಕಿಡಿ

ಕಲಬುರಗಿ,ಜೂ.೧- ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಮತ್ತೆ ಏರಿಕೆ ಮಾಡಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿ ಕಾರಿದ್ದಾರೆ.


ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾಸ್, ಪೆಟ್ರೋಲ್, ಡಿಸೇಲ್ ಪ್ರತಿಯೊಂದರ ಬೆಲೆಯನ್ನು ದಿನ ಬಿಟ್ಟು ದಿನ ಏರಿಕೆ ಮಾಡುತ್ತಿದ್ದು, ಅವರಿಗೆ ದೇಶದ ಜನರ ಬಗ್ಗೆ ಕಾಳಜಿ ಇಲ. ಮೋದಿ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಬರೀ ಮಾತಿನಿಂದ ಜನರ ಸಮಸ್ಯೆ ಬಗ್ಗೆ ಪರಿಹಾರ ಹೇಳುತ್ತಾರೆ. ಆದರೆ ನಿಜವಾದ ಪರಿಹಾರ ಮಾಡುತ್ತಿಲ್ಲ. ಮಾತು ಮಾತಿಗೂ ವಿರೋಧ ಪಕ್ಷದವರ ಸಹಕಾರ ಇಲ್ಲ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರೂಪಾಯಿ ಬೆಲೆ ದಿನ ದಿನಕ್ಕೆ ಕಡಿಮೆಯಾಗುತ್ತಿದೆ. ನೀರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಮನರೇಗಾ ಸೇರಿ ಹಲವು ಕಾರ್ಯಕ್ರಮಕ್ಕೆ ಇವರ ಬಳಿ ಹಣ ಇಲ್ಲ. ಈ ಕೇಂದ್ರ ಸರ್ಕಾರ ಮಾತಿನ ಮಲ್ಲನ ಸರ್ಕಾರವಾಗಿದೆ ಎಂದು ಟೀಕಿಸಿದರು.